ಹಿಂದೂ ಕುರಿತ ಹೇಳಿಕೆಗೆ ವ್ಯಾಪಕ ಟೀಕೆ: ಯೂ ಟರ್ನ್ ಹೊಡೆದ ಸತೀಶ್ ಜಾರಕಿಹೊಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೂ ಪದದ ಅರ್ಥವೇ ಅಶ್ಲೀಲ, ಭಾರತೀಯ ಪದವಲ್ಲ, ಅದು ಪರ್ಷಿಯನ್ ಪದ ಎಂಬುದಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಇದೀಗ ಯೂ ಟರ್ನ್ ಹೊಡೆದಿದ್ದು, ನಾನು ಆ ಅರ್ಥದಲ್ಲಿ ಹೇಳಿಲ್ಲ ಎಂದಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಜಾರಕಿಹೊಳಿ , ಸಿಂಧು ನದಿಯಿಂದ ಆಚೆಗೆ ವಾಸಿಸುವ ಜನರ ಕುರಿತು ಪರ್ಷಿಯನ್ ಭೌಗೋಳಿಕ ಪ್ರದೇಶದಲ್ಲಿ ಮೊದಲಿಗೆ ಹಿಂದೂ ಶಬ್ದ ಬಳಕೆಗೆ ಬಂದಿತು. ಕ್ರಿ.ಪ್ರೊ.550-486 ಸಂದರ್ಭದಲ್ಲಿ ನಿರ್ದಿಷ್ಟವಾಗಿ ಆರನೇ ಶತಮಾನದಲ್ಲಿ ನಮೂದಿಸಲಾಗಿದೆ. ಇದರ ಮೂಲ ವಿಕಿಪೀಡೀಯಾವಾಗಿದೆ. ಹಿಂದೂ ಪದದ ಕುರಿತು ವಿವಿಧ ಲೇಖಕರು ಬರೆದ ವಿಕಿಪೀಡಿಯಾ ಲೇಖನಗಳ ಆಧಾರದಲ್ಲಿ ನಾನು ಮಾತನಾಡಿದ್ದೆ , ಇದು ನನ್ನ ವೈಯಕ್ತಿಯ ಅಭಿಪ್ರಾಯವಲ್ಲ ಎಂದು ಯೂ ಟರ್ನ್ ಹೊಡೆದಿದ್ದಾರೆ.

ಈ ಮೊದಲು ಸತೀಶ್ ಜಾರಕಿಹೊಳಿ ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದು ನಿಮಗೆ ತಿಳಿದರೆ ನಿಮಗೆ ನಾಚಿಕೆ ಆಗುತ್ತೆ. ಎಲ್ಲಿಂದಲೋ ಬಂದಿರೋ ಧರ್ಮವನ್ನು ತಂದು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!