VIRAL VIDEO| ಬೀದಿಗೆ ಬಂತು ಕುಟುಂಬ ಜಗಳ, ರೈಲ್ವೆ ನಿಲ್ದಾಣದಲ್ಲೇ ಪತಿ-ಪತ್ನಿಯ ಫೈಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕುಟುಂಬ ಅಂದ ಮೇಲೆ ಮನಸ್ತಾಪ, ಗಲಾಟೆ ಕಾಮನ್.‌ ಅದೇನಿದ್ದರೂ ನಾಲ್ಕು ಗೋಡೆ ಮಧ್ಯೆಯಿದ್ದರೆ ಚಂದ ಬೀದಿಗೆ ಬಂದರೆ ನಗೆಪಾಟಲಿಗೀಡಾವುದು ಅಷ್ಟೇ ಸಲೀಸು. ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿ ನಡುವಿನ ಜಗಳ ನಾನಾ..ನೀನಾ ಎಂಬ ಹಂತಕ್ಕೆ ಹೋಗಿದ್ದ ಬೀದಿಗಳಲ್ಲೇ ಹಡೆದಾಡಿಕೊಳ್ಳುವ ಘಟನೆಗಳೂ ಹೊಸತೇನಲ್ಲ. ನೀವು ಈಗ ನೋಡಲಿರುವ ವೀಡಿಯೋ ಇದುವರೆಗೆ ನೋಡಿದ ಎಲ್ಲಾ ವಿಡಿಯೋಗಳಿಗಿಂತ ಭಿನ್ನವಾಗಿದೆ.

ಟ್ವಿಟ್ಟರ್‌ನಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಪತಿ-ಪತ್ನಿ ಯಾವುದೋ ರೈಲ್ವೇ ನಿಲ್ದಾಣದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಪತಿ ಕಿವಿಯಲ್ಲಿ ಏನ್‌ ಹೇಳಿದನೋ ಗೊತ್ತಿಲ್ಲ, ಅಷ್ಟಕ್ಕೇ ಚಂಡಿಯಾದ ಪತ್ನಿ ರಪ್‌ ಅಂತ ಕೆನ್ನೆಗೆ ಬಾರಿಸಿದ್ದಾಳೆ. ಆ ಹೊಡೆತದಿಂದ ಚೇತರಿಸಿಕೊಳ್ಳುವ ಮೊದಲೇ ಅವನ ಕಾಲುಗಳನ್ನು ಹಿಡಿದು WWE ನಂತೆ ನೆಲಕ್ಕೆ ಬೀಳಿಸಿದಳು. ಕೋಪೋದ್ರಿಕ್ತನಾದ ಗಂಡ ಆಕೆಯ ಕೂದಲು ಹಿಡಿದು ಥಳಿಸಲು ಪ್ರಯತ್ನಿಸಿದರೂ ಅವಕಾಶ ಸಿಗಲಿಲ್ಲ. ಬದಲಿಗೆ ಗಂಡನ ಕೂದಲನ್ನು ಹಿಡಿದು ತನ್ನ ಕೈಗಳಿಂದ ಸಾಧ್ಯವಾದಷ್ಟು ಬಲವಾಗಿ ಹೊಡೆದಿದ್ದಾಳೆ.

ಪಕ್ಕದಲ್ಲಿದ್ದವರು ಇದನ್ನು ನೋಡುತ್ತಿದ್ದರು ಆದರೆ ಯಾರೂ ತಡೆಯಲು ಪ್ರಯತ್ನಿಸಲಿಲ್ಲ. ಮಹಿಳೆ ತೀರಾ ಬಲಹೀನಳಾಗಿದ್ದರೂ ಆಕೆಯ ಪತಿ ಆಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ಮೇಲೇಳಲು ಸಾಧ್ಯವಾಗದೆ ಒದ್ದಾಡಿದ್ದಾರೆ. ಅಲ್ಲೇ ಇದ್ದ ಯಾರೋ ವಿಡಿಯೋ ತೆಗೆದಿದ್ದು ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!