ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಮಂತಾ ಹಾಗೂ ವಿಜಯ ದೇವರಕೊಂಡ ತುಂಬಾನೇ ಆತ್ಮೀಯ ಸ್ನೇಹಿತರು, ವಿಜಯ್ ಯಾವ ಸಂದರ್ಶನಕ್ಕೆ ಹೋದರೂ ಸಮಂತಾರನ್ನು ಹಾಡಿ ಹೊಗಳುತ್ತಾರೆ.
ವಿಜಯ್ ಸಮಂತಾ ಬಗ್ಗೆ ಶಾಕಿಂಗ್ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ. ನಟಿ ಸಮಂತಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ಈ ಸಮಸ್ಯೆ ಎದುರಾದಾಗ ಖುಷಿ ಸಿನಿಮಾ ಶೂಟಿಂಗ್ ಮುಕ್ಕಾಲು ಭಾಗ ಮುಗಿದಿತ್ತು. ಅದಾದ ನಂತರ ಸಮಂತಾ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಆಗ ನೋಡೋಕೆ ಆರಾಮಾಗಿಯೇ ಇರುವಂತೆ ಕಾಣಿಸ್ತಾರೆ. ಅವರಿಗೇನು ಸಮಸ್ಯೆ ಎನಿಸುತ್ತಿತ್ತು. ನಂತರ ಅವರು ಕೆಲ ಕಾಲ ನನ್ನ ಬಳಿ ಮಾತನಾಡೋದನ್ನೇ ನಿಲ್ಲಿಸಿದ್ರು ಎಂದು ವಿಜಯ್ ಹೇಳಿಕೊಂಡಿದ್ದಾರೆ. ಕೆಲಸದ ವಿಷಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಳ್ಳೋಕೆ ಸಮಂತಾಗೆ ಇಷ್ಟ ಇರಲಿಲ್ಲ.
ಆದರೆ ತದನಂತರ ನಿಧಾನವಾಗಿ ತಮ್ಮ ಸಮಸ್ಯೆ ಬಗ್ಗೆ ಸಮಂತಾ ಮಾತನಾಡೋದಕ್ಕೆ ಶುರು ಮಾಡಿದ್ದರು ಎಂದಿದ್ದಾರೆ.