ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತಿಯ ದೀರ್ಘಾಯಸ್ಸಿಗಾಗಿ ಉತ್ತರ ಭಾರತದಲ್ಲಿ ಕರ್ವಾಚೌತ್ ಆಚರಣೆ ಮಾಡಲಾಗುತ್ತದೆ, ಇದನ್ನು ಮುಖ್ಯವಾದ ಹಬ್ಬವೆಂದೇ ಪರಿಗಣಿಸಲಾಗುತ್ತದೆ, ಪತ್ನಿಯು ಇಡೀ ದಿನ ಉಪವಾಸ ಮಾಡಿ, ಚಂದ್ರ ಕಾಣಿಸಿದ ಮೇಲೆ ಜರಡಿಯಲ್ಲಿ ಪತಿಯನ್ನು ನೋಡಿ ನಂತರ ಉಪವಾಸ ಮುರಿಯುತ್ತಾರೆ.
ಲಕ್ನೋದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಕರ್ವಾಚೌತ್ ದಿನದಂದು ಮನೆಗೆ ಬಂದಿಲ್ಲ, ಹಬ್ಬದ ಆಚರಣೆ ಮಾಡಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಭೂಟಾ ಪೊಲೀಸ್ ಠಾಣಾ ವ್ಯಾಪ್ತಿಯ ಗುಗಾ ಗ್ರಾಮದ ಪ್ರಮೋದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅವರಿಗೆ ಕೇವಲ 24 ವರ್ಷವಾಗಿತ್ತು. ಪ್ರಮೋದ್ ಪತ್ನಿ ಪ್ರೀತಿ ತವರು ಮನೆಗೆ ಹೋಗಿದ್ದರು. ಕರ್ವಾಚೌತ್ ದಿನದಂದು ಗಂಡನ ಮನೆಗೆ ವಾಪಾಸಾಗದೇ ಅಲ್ಲೇ ಇದ್ದಾರೆ ಎಂದು ಬೇಸರದಲ್ಲಿದ್ದರು ಎನ್ನಲಾಗಿದೆ.
ಕರ್ವಾಚೌತ್ ಮರುದಿನ ಮಗಳನ್ನು ಕಳಿಸಿಕೊಡದ ಅತ್ತೆ ಜೊತೆ ಪ್ರಮೋದ್ ಜಗಳ ಆಡಿದ್ದರು ಎನ್ನಲಾಗಿದೆ, ತಡನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಭೂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.