ಪತ್ನಿ ಅನುಮಾನಾಸ್ಪದ ಸಾವು, ವಿಚಾರಣೆಗೆ ಭಯಬಿದ್ದ ಪತಿ ಆತ್ಮಹತ್ಯೆ

ದಿಗಂತ ವರದಿ ಕೆ.ಆರ್.ಪೇಟೆ :

ಪತ್ನಿಯ ಅನುಮಾನಸ್ಪದ ಸಾವಿನ ಹಿನ್ನೆಲೆ ಗಂಡ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ತಡರಾತ್ರಿ ಗದ್ದೆಹೊಸೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಗದ್ದೆಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪತ್ನಿಯ ಸಾವಿಗೆ ಹೆದರಿ ಕೆರೆಗೆ ಹಾರಿ ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗದ್ದೆ ಹೊಸೂರು ಗ್ರಾಮದ ಮಂಜೇಗೌಡ ಎಂಬುವವರ ಪುತ್ರ ಮೋಹನ್ ಎಂಬ ಯುವಕನೊಂದಿಗೆ ಬೇವಿನಹಳ್ಳಿ ಗ್ರಾಮದ ಸ್ವಾತಿ ಎಂಬ ಯುವತಿಯ ಮದುವೆ ಮೂರು ವರ್ಷಗಳ ಹಿಂದೆ ನೆರವೇರಿತ್ತು. ದಂಪತಿಗಳಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದ್ದು ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಘಟನೆ ಬಳಿಕ ಮೃತ ಸ್ವಾತಿ ಕುಟುಂಬದವರು ಗಂಡ ಮೋಹನ್‌ ಮತ್ತು ಕುಟುಂಬದವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೋಹನ್ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೌಟುಂಬಿಕ ಕಲಹಕ್ಕೆ ದಂಪತಿಗಳ ಬದುಕು ದುರಂತ ಅಂತ್ಯ ಕಂಡಿದ್ದು, ದಂಪತಿಯ ಸಾವಿನಿಂದ ಒಂದೂವರೆ ವರ್ಷದ ಹೆಣ್ಣು ಮಗು ಅನಾಥವಾಗಿದೆ.

ಈ ನಡುವೆ ಮೃತ ಸ್ವಾತಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಕಿಕ್ಕೇರಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!