ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತಿ ಮತ್ತು ಪತ್ನಿ ಸಮಾನವಾಗಿ ಮನೆಕೆಲಸವನ್ನು ಹಂಚಿಕೊಳ್ಳಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
೧೩ ವರ್ಷದ ದಾಂಪತ್ಯವನ್ನು ಅಂತ್ಯಗೊಳಿಸಲು ಇಚ್ಛಿಸಿ ದಂಪತಿ ಡಿವೋರ್ಸ್‌ಗೆ ಅರ್ಜಿ ಹಾಕಿದ್ದರು. ಇವರ ದಾಂಪತ್ಯ ಕೊನೆಯಾಗಲು ಮನೆಕೆಲಸವೇ ದೊಡ್ಡ ಕಾರಣವಾಗಿತ್ತು.
ಈ ಬಗ್ಗೆ ಹೈಕೋರ್ಟ್ ವಿಚಾರಣೆ ನಡೆಸಿದ್ದು ಮಹಿಳೆಯರಷ್ಟೆ ಮನೆಕೆಲಸ ಮಾಡಬೇಕು ಎನ್ನುವ ಹಳೆಯ ಮನಸ್ಥಿತಿಯನ್ನು ಬದಲಾಯಿಸಬೇಕಿದೆ. ಗಂಡ ಹೆಂಡತಿ ಇಬ್ಬರೂ ಸಮಾನವಾಗಿ ಕೆಲಸ ಮಾಡಬೇಕು.
ಕೆಲ ವರ್ಷಗಳ ಹಿಂದೆಯೂ ಮನೆಯಲ್ಲಿ ಕೆಲಸ ಮಾಡುವ ವಿಚಾರಕ್ಕೆ ಡಿವೋರ್ಸ್ ಪಡೆಯಲು ದಂಪತಿ ಮುಂದಾಗಿದ್ದರು. ಹೆಂಡತಿ ಬರೀ ಫೋನ್‌ನಲ್ಲಿ ಇರ‍್ತಾಳೆ ಮನೆ ಕೆಲಸ ಮಾಡೋದಿಲ್ಲ ಎಂದು ಹೇಳಿದರೆ, ಆಫೀಸ್ ಕೆಲಸ ಮುಗಿಸಿ ಸುಸ್ತಾಗಿ ಬಂದಮೇಲೂ ನನಗೆ ಮನೆಕೆಲಸ ಮಾಡುವಂತೆ ಗಂಡ ಒತ್ತಾಯಿಸುತ್ತಾನೆ ಎಂದು ಹೆಂಡತಿ ದೂರಿದ್ದರು. ಆದರೂ ನ್ಯಾಯಾಲಯ ಇವರಿಗೆ ವಿಚ್ಛೇದನ ನೀಡಿರಲಿಲ್ಲ.