ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಸಂಜೆ ವಿಶಾಖಪಟ್ಟಣಂನ ಆರ್‌ಕೆ ಬೀಚ್‌ಗೆ ಸಮಯ ಕಳೆಯಲೆಂದು ದಂಪತಿ ಬಂದಿದ್ದಾರೆ. ಇದ್ದಕ್ಕಿದ್ದಂತೆ ಪತ್ನಿ ಕಾಣೆಯಾಗಿದ್ದು, ನಿನ್ನೆ ಸಂಜೆಯಿಂದ ಆಕೆಗಾಗಿ ಹುಡುಕಾಟ ನಡೆಯುತ್ತಿದೆ. ಸಾಯಿ ಪ್ರಿಯಾ-ಶ್ರೀನಿವಾಸ್ ದಂಪತಿ ಮದುವೆ ವಾರ್ಷಿಕೋತ್ಸವ ಇದ್ದುದರಿಂದ ನಿನ್ನೆ ಒಟ್ಟಿಗೆ ಸಮಯ ಕಳೆಯಲೆಂದು ಬೀಚ್‌ಗೆ ಬಂದಿದ್ದಾರೆ. ಸಾಯಿ ಪ್ರಿಯಾ ಪತಿಗೆ ಯಾಉದೋ ಮೆಸೇಜ್ ಬಂದಿದ್ದರಿಂದ ಅದನನು ಪರಿಶೀಲಿಸಲು ಇತ್ತ ಕಡೆ ಬರುತ್ತಿದ್ದಂತೆ ಆಕೆ ನಾಪತ್ತೆಯಾಗಿದ್ದಾರೆ.
ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದಾರೆಂದು ಭಾವಿಸಿ ಪೊಲೀಸರಿಗೆ ಶ್ರೀನಿವಾಸ್ ದೂರು ನೀಡಿದ್ದಾರೆ. ಆದರೆ, ಕಣ್ಣಾರೆ ಕಂಡಿಲ್ಲ ನಾನು ಮೆಸೇಜ್ ಪರಶೀಲಿಸಲು ತೀರಕ್ಕೆ ಹೋಗಿ ಬರುವಷ್ಟರಲ್ಲಿ ನನ್ನ ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೊ ಈಜುಗಾರರ ಸಹಾಯದಿಂದ ಸಮುದ್ರದಲ್ಲಿ ಹುಡುಕಾಡಿದರೂ ಸಾಯಿ ಪ್ರಿಯಾ ಇದುವರೆಗೂ ಪತತೆಯಾಗಿಲ್ಲ.
ಆದರೂ ಸಾಯಿ ಪ್ರಿಯಾಗಾಗಿ ಹುಡುಕಾಟ ಮುಂದುವರೆದಿದೆ. ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಹಲವು ಅನುಮಾನಗಳಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಿಜವಾಗಿಯೂ ಸಮುದ್ರದಲ್ಲಿ ಕೊಚ್ಚಿಹೋಗಿದ್ದಾರೆಯೇ? ಅಥವಾ ಇನ್ನೇನಾದರೂ ಸಂಭವಿಸಿದೆಯೇ? ಎಂಬ ನಿಟ್ಟಿನಲ್ಲಿ ತನಿಖೆ ನಡೆದಿದೆ.