ಒಬ್ಬರಿಗೊಬ್ಬರು ತಿಳಿಯದಂತೆ 6 ಪತ್ನಿಯರನ್ನು ಹೊಂದಿದ್ದ ಭೂಪ: ಒಬ್ಬಳಿಗೆ ಮೋಸ ಮಾಡಿ ಸಿಕ್ಕಿಬಿದ್ದ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌  ”
ಈ ಕಥೆಯ ನಾಯಕ ಖತರ್ನಾಕ್‌ ಆಸಾಮಿ. ಆತ ಎಂತಹ ಕಿರಾತನೆಂದರೆ ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಮದುವೆಯಾಗಿದ್ದಾನೆ. ಆಚ್ಚರಿಯೆಂದರೆ, ಆತನ ಯಾವೊಬ್ಬ ಪತ್ನಿಗೂ ಇನ್ನೊಬ್ಬಳ ಬಗ್ಗೆ ತಿಳಿಯದಂತೆ ರಹಸ್ಯ ಕಾಪಾಡಿಕೊಂಡಿದ್ದಾನೆ. ಆದರೆ ಇವರಲ್ಲಿ ಒಬ್ಬ ಪತ್ನಿಗೆ ಮೋಸ ಮಾಡಿದ್ದರಿಂದ ಆತನ ಗ್ರಹಚಾರ ಕೆಟ್ಟಿದ್ದು ಅಷ್ಟೂ ಹೆಂಡತಿಯರ ಗುಟ್ಟು ಬಯಲಾಗಿದೆ.
ತನ್ನ ಪತಿ 20 ಲಕ್ಷ ರೂಪಾಯಿ ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಹೈದರಾಬಾದ್‌ ನ ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದರು. ಆ ದೂರನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಒಂದೊಂದೇ ರೋಚಕ ವಿಚಾರಗಳು ತಿಳಿದುಬರತೊಡಗಿವೆ. ಬಾಲಿವುಡ್‌ ನ ಕೆಲವು ಚಿತ್ರಗಳಲ್ಲಿ ಕಥಾನಾಯಕ ಮೂರ್ನಾಲ್ಕು ಮದುವೆಯಾಗಿ ಪಜೀತಿ ಪಡುವಂತಹ ಸೀನ್‌ ಗಳಿವೆ. ಆದರೆ, ಈ ಮನುಷ್ಯ ಎಲ್ಲ ಮಿತಿಗಳನ್ನು ದಾಟಿದಂತಿದೆ. ಕೊನೆಗೂ ಆರು ಪತ್ನಿಯರ ಗಂಡ ಅಡಪ ಶಿವ ಶಂಕರಬಾಬು (33) ವಿಶಾಖಪಟ್ಟಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನ ಯಾವುದೇ ಹೆಂಡತಿಯರಿಗೆ ಪರಸ್ಪರರ ಪರಿಚಯವಿಲ್ಲ. ಆತನ ಪತ್ನಿಯರ ಸಂಖ್ಯೆ ಇನ್ನೂ ಹೆಚ್ಚಿಗೆ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
“ಬಾಬು ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಒಳ್ಳೆಯ ಸಂಬಳ ಪಡೆಯುತ್ತಿದ್ದ. ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಮಹಿಳೆಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಆ ಬಳಿಕ ಅವರನ್ನು ಮದುವೆಯಾಗಿ ನಗದು ಮತ್ತು ಚಿನ್ನದೊಂದಿಗೆ ನಾಪತ್ತೆಯಾಗುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!