May 26, 2026
Tuesday, May 26, 2026
spot_img

Viral | ಮಹಡಿಯಿಂದ ಕೋಟಿ ರೂಪಾಯಿ ಎಸೆದ ಪತ್ನಿ, ಗಂಡ-ಹೆಂಡಿರ ಜಗಳದಿಂದ ದಾರಿಹೋಕರಿಗೆ ಲಾಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗಂಡ-ಹೆಂಡತಿಯ ಜಗಳಕ್ಕೆ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ವೇಸ್ಟ್‌ ಆಗಿದೆ.

ಹೌದು, ಅದು ಹೇಗೆ ಅಂದ್ರೆ ಹೆಂಡತಿಯೊಬ್ಬರು ಗಂಡನ ಜೊತೆ ಜಗಳ ಆಡಿ ಕೋಪದಲ್ಲಿ ತನ್ನ ಗಂಡನ ಒಂದೂವರೆ ಕೋಟಿ ರೂಪಾಯಿಯಷ್ಟು ಹಣವನ್ನು ಬಾಲ್ಕನಿಯಿಂದ ಎಸೆದಿದ್ದಾರೆ.

ಚೀನಾದ ಗುವಾಂಗ್‌ಡಾಂಗ್‌ನ ಶಾಂಟೌ ನಗರದಲ್ಲಿ ಈಘಟನೆ ನಡೆದಿದ್ದು, ವಿಡಿಯೋ ವೈರಲ್‌ ಆಗಿದೆ. ಹಾಂಕಾಂಗ್ ಕರೆನ್ಸಿಯ 1,000 ಮುಖಬೆಲೆಯ ನೋಟುಗಳನ್ನು ಆಕೆ ಎಸೆದಿದ್ದು ಅದರ ಒಟ್ಟು ಮೌಲ್ಯ ಸುಮಾರು 1.5 ಕೋಟಿ ರೂ.ಗಿಂತ ಹೆಚ್ಚಿತ್ತು ಎನ್ನಲಾಗಿದೆ.

ಮೇಲಿನಿಂದ ಹಣದ ಮಳೆ ಬೀಳುತ್ತಿದ್ದಿದ್ದನ್ನು ಗಮನಿಸಿದ ಜನ ದುಡ್ಡಿಗಾಗಿ ಮುಗಿಬಿದ್ದಿದ್ದಾರೆ. ಕೆಲ ಕಾಲ ಇಲ್ಲಿ ಟ್ರಾಫಿಕ್‌ ಜಾಮ್‌ ಕೂಡ ಆಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಹಣವನ್ನು ಸಂಗ್ರಹಿಸಿದವರು ಅದನ್ನು ವಾಪಸ್ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !