ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ಜೈಲಿನಲ್ಲಿ ದರ್ಶನ್‌ರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಕಾನೂನು ಸಮರದ ಕುರಿತು ಚರ್ಚಿಸಲು 6ನೇ ಬಾರಿ ಜೈಲಿಗೆ ಆಗಮಿಸಿದ್ದಾರೆ.
ವಿಜಯಲಕ್ಷ್ಮಿಜೊತೆ ದಿನಕರ್ ತೂಗುದೀಪ, ನಟ ಧನ್ವೀರ್ ಗೌಡ, ವಿಜಯಲಕ್ಷ್ಮಿ ಅವರ ತಂಗಿಯ ಗಂಡ ಸುಶಾಂತ್ ನಾಯ್ಡು ಆಗಮಿಸಿದ್ದಾರೆ. ಈ ವೇಳೆ, ಎರಡು ಬ್ಯಾಗ್‌ಗಳಲ್ಲಿ ಬಟ್ಟೆ ಮತ್ತು ಬೇಕರಿ ತಿನಿಸುಗಳನ್ನು ತರಲಾಗಿದೆ.