ಕಾಡು ಹಂದಿ ಬೇಟೆಯಾಡಿದ ಪ್ರಕರಣ: ಓರ್ವ ಬಂಧನ, ಇನ್ನೋರ್ವ ಪರಾರಿ

ಹೊಸದಿಗಂತ ವರದಿ,ಅಂಕೋಲಾ:

ತಾಲೂಕಿನ ಹೆಬ್ಬುಳದಲ್ಲಿ ಕಾಡು ಹಂದಿಯನ್ನು ಭೇಟೆಯಾಡಿ ಮಾಂಸ ಮಾಡಿ ತ್ಯಾಜ್ಯವನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದು ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಹೆಬ್ಬುಳ ನಿವಾಸಿ ರಾಜೇಶ ಚಂದ್ರು ಪಡ್ತಿ (29) ಬಂಧಿತ ಆರೋಪಿಯಾಗಿದ್ದು ಇನ್ನೋರ್ವ ಆರೋಪಿ ಸಂತೋಷ ದತ್ತಾ ಪಡ್ತಿ ಎಂಬಾತ ತಲೆ ಮರೆಸಿಕೊಂಡಿದ್ದಾನೆ.
ಆರೋಪಿತರು ಮಾಸ್ತಿಕಟ್ಟಾ ವಲಯ ಅರಣ್ಯ ವ್ಯಾಪ್ತಿಯ ಹೆಬ್ಬುಳ ವಿಭಾಗದ ಅರಣ್ಯ ಪ್ರದೇಶದಲ್ಲಿ ಕಾಡು ಹಂದಿಯನ್ನು ಭೇಟೆಯಾಡಿ ತುಂಡರಿಸಿ ಮಾಂಸ ಮಾಡಿ ತಲೆ,ಕಾಲು,ಕರುಳು ಮೊದಲಾದ ಭಾಗಗಳನ್ನು ಮನೆಯ ಪಕ್ಕದ ತೋಟದಲ್ಲಿ ಗುಂಡಿ ತೋಡಿ ಹೂತು ಹಾಕಿದ್ದರು ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ
ಡಾ ಪ್ರಶಾಂತ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಅಣ್ಣಯ್ಯ ಗೌಡ, ಮಾಸ್ತಿಕಟ್ಟಾ ವಲಯ ಅರಣ್ಯಾಧಿಕಾರಿ ವಿನಾಯಕ ನಾಯ್ಕ, ಹೆಬ್ಬುಳ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಅರುಣ ನಡಕಟ್ಟಿಣ,ಅರಣ್ಯ ರಕ್ಷಕ ಚೆನ್ನಪ್ಪ ಲಮಾಣಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here