ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡಾನೆ ದಾಳಿ ಮತ್ತೆ ಹೆಚ್ಚಾಗಿದ್ದು, ಜಮೀನುಗಳಿಗೆ ನುಗ್ಗಿ ತೆಂಗು ಬೆಳೆ ನಾಶಪಡಿಸಿದೆ.
ಐದಾರು ಮಂದಿ ರೈತರ ಜಮೀನಿಗೆ ಕಾಡಾನೆ ಗುಂಪು ಲಗ್ಗೆ ಇಟ್ಟಿದ್ದು ಐದನೇ ಬಾರಿ ದಾಳಿ ನಡೆಸಿವೆ. ಕಾಡಾನೆ ದಾಳಿಗೆ ಬೇಸತ್ತುಹೋದ ರೈತರು ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಡಿಸಿಎಫ್ ಶ್ರೀಪತಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ಸೂಕ್ತ ಸೋಲಾರ್ ಫೆನ್ಸಿಂಗ್ ಹಾಗೂ ರೈಲ್ವೆ ಬ್ಯಾರಿಕೇಡ್ ಅಳವಡಿಸುವಂತೆ ಒತ್ತಾಯಿಸಿದ್ದಾರೆ.