ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುವನಂತಪುರಂನ ಎರ್ನಾಕುಲಂನಲ್ಲಿ ಆನೆಯೊಂದು ಲಾರಿ ಚಾಲಕನನ್ನು ತುಳಿದು ಕೊಂದಿದೆ.
ಅಂಕಮಾಲಿಯ ಕಿದಂಗೂರ್ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ಇಂದು ಮದವೇರಿದ ಆನೆಯೊಂದ ಅಟ್ಟಹಾಸ ಮೆರೆದಿದ್ದು, ಲಾರಿ ಚಾಲಕನನ್ನು ಕೊಂದು ಹಾಕಿದೆ. ಆನೆಯ ದಾಳಿಯಿಂದ ಮಾವುತನೂ ಗಂಭೀರವಾಗಿ ಗಾಯಗೊಂಡಿದ್ದಾನೆ.
ಇದನ್ನೂ ಓದಿ:
ದೇವಸ್ಥಾನದ ಉತ್ಸವಗಳಲ್ಲಿ ಪಾಲ್ಗೊಳ್ಳಲು ಮಯ್ಯನಾಡ್ ಪಾರ್ಥಸಾರಥಿ ಎಂಬ ಆನೆಯನ್ನು ಕರೆತರಲಾಗಿತ್ತು. ಸ್ನಾನ ಮಾಡಿಸಲು ಆನೆಯನ್ನು ದೇವಸ್ಥಾನದ ಬಳಿ ಕರೆದುಕೊಂಡು ಬಂದಾಗ ಆನೆ ಮದವೇರಿದಂತಾಡಿತ್ತು.
ಆನೆಯನ್ನು ಲಾರಿಯಲ್ಲಿ ಕರೆದುಕೊಂಡು ಬಂದಿದ್ದ ಚಾಲಕ ವಿಷ್ಣು ಅದನ್ನು ಸಮಾಧಾನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಆನೆ ಅವರನ್ನು ಸಾಯಿಸಿದೆ. ಮಾವುತ ಪ್ರದೀಪ್ ಕೂಡ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.



