ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರ್ಜುನನ ನಿಧನದ ನಂತರ ಸ್ಥಗಿತಗೊಂಡಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ಮತ್ತೆ ಆರಂಭವಾಗಿದೆ. ಇಂದು ಕಾರ್ಯಾಚರಣೆ ಆರಂಭವಾದ ಎರಡು ಗಂಟೆಯಲ್ಲೇ ಪುಂಡಾನೆಯನ್ನು ಸೆರೆಹಿಡಿಯಲಾಗಿದೆ.
ಹಾಸನದ ಆಲೂರು ತಾಲೂಕಿನ ನಲ್ಲೂರು ಗ್ರಾಮದ ಸಾರಾ ಎಸ್ಟೇಟ್‌ನಲ್ಲಿ ಒಂಟಿ ಸಲಗ ಸಿಕ್ಕಿಬಿದ್ದಿದೆ. ಸಲಗ ಓಡಿಹೋಗಲು ಎಲ್ಲ ಪ್ರಯತ್ನ ಮಾಡಿದ್ದು, ಅಭಿಮನ್ಯ ಆನೆಗೆ ಜೋರಾಗಿ ಗುದ್ದಿದೆ. ನಂತರ ದೊಡ್ಡ ಹಗ್ಗಗಳಿಂದ ಅದನ್ನು ಕಟ್ಟಿಹಾಕಲಾಗಿದೆ.
ಇಷ್ಟಾದರೂ ಸುಮ್ಮನಾಗದ ಪುಂಡಾನೆ, ಹಗ್ಗ ಹರಿದುಕೊಳ್ಳಲು ಎಲ್ಲ ಪ್ರಯತ್ನ ಮಾಡಿದೆ. ಆದರೆ ಆನೆಯ ಸುತ್ತ ಅಭಿಮನ್ಯು ಹಾಗೂ ಜನರಿದ್ದು, ಅಭಿಮನ್ಯುಗೆ ಹೆದರಿ ಆನೆ ಸುಮ್ಮನಾಗಿದೆ.
ಮತ್ತೆ ಕಾರ್ಯಾಚರಣೆ ಮುಂದುವರಿಯಲಿದೆ.