ಅಘಾತಕಾರಿ ಸುದ್ದಿ: 5 ದಶಕಗಳಲ್ಲಿ ವನ್ಯಜೀವಿಗಳ ಸಂಖ್ಯೆ 69 ಪ್ರತಿಶತದಷ್ಟು ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಾನವ ವಿನಾಶಕಾರಿ ಚಟುವಟಿಕೆಗಳಿಂದ ಪ್ರಕೃತಿ ಎಷ್ಟು ಬಸವಳಿದು ಹೋಗಿದೆ ಎಂದು ತೋರಿಸುವ ಡಬ್ಲ್ಯುಡಬ್ಲ್ಯುಎಫ್ ವರದಿ (ಲಿವಿಂಗ್ ಪ್ಲಾನೆಟ್ ಇಂಡೆಕ್ಸ್) ಗುರುವಾರ ಬಿಡುಗಡೆಯಾಗಿದ್ದು, ಈ ಮೌಲ್ಯಮಾಪನದ ಪ್ರಕಾರ, ಕಳೆದ 50 ವರ್ಷಗಳಲ್ಲಿ ವಿಶ್ವಾದ್ಯಂತ ವನ್ಯಜೀವಿಗಳ ಸಂಖ್ಯೆಯಲ್ಲಿ 70 ಪ್ರತಿಶತದಷ್ಟು ಕುಸಿತವಾಗಿದೆ ಎಂಬ ಆಘಾತಕಾರಿ ವಿಚಾರ ಬಯಲಾಗಿದೆ.
ಈ ವರದಿಯ ಪ್ರಕಾಶ, 5,000 ಕ್ಕೂ ಹೆಚ್ಚು ಜಾತಿಯ ಸಸ್ತನಿಗಳು, ಪಕ್ಷಿಗಳು, ಉಭಯಚರಗಳು, ಸರೀಸೃಪಗಳು ಹಾಗೂ ಮೀನುಗಳಲ್ಲಿ 32,000 ಕ್ಕೂ ಹೆಚ್ಚು ನಶಿಸಿವೆ.
ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್‌ನಂತಹ ಜೀವವೈವಿಧ್ಯ-ಸಮೃದ್ಧ ಪ್ರದೇಶಗಳಲ್ಲಿ ಪ್ರಾಣಿಗಳ ವಿನಾಶದ ದತ್ತಾಂಶ ದಂಗುಬಡಿಸುವಂತಿದೆ. ಅಲ್ಲಿ ಕಳೆದ 50 ವರ್ಷಗಳಲ್ಲಿ ಪ್ರಾಣಿಗಳ ವಿನಾಶದ ಪ್ರಮಾಣದ ಅಂಕಿ ಅಂಶವು ಶೇಕಡಾ 94 ರಷ್ಟಿದೆ.
ಜೀವ ವೈವಿಧ್ಯತೆಯ ತಾಣವಾದ ಆಫ್ರಿಕಾದಲ್ಲಿ ವನ್ಯಜೀವಿಗಳ ಪ್ರಮಾಣದಲ್ಲಿ ವಿನಾಶಕಾರಿ ಕುಸಿತ ಸಂಭವಿಸಿದೆ. ಅಲ್ಲಿ 1970 ರಿಂದ ಈಚೆಗೆ ವನ್ಯಜೀವಿ ಸಂಖ್ಯೆಯಲ್ಲಿ ಮೂರನೇ ಎರಡರಷ್ಟು ಕುಸಿತ ಸಂಭವಿಸಿದೆ. ಯುರೋಪ್ ಖಂಡದಲ್ಲಿಯೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ, ಅಲ್ಲಿನ ವನ್ಯಜೀವಿ ಸಂಖ್ಯೆಯಲ್ಲಿ 18 ಪ್ರತಿಶತದಷ್ಟು ಕುಸಿತ ಸಂಭವಿಸಿರುವುದನ್ನು ವರದಿ ತೋರಿಸಿದೆ.
ಜಾಗತಿಕವಾಗಿ, 1970 ರಿಂದ ಕಾಡು ಪ್ರಾಣಿಗಳ ಸಂಖ್ಯೆಯು ಶೇ. 69 ರಷ್ಟು ಕುಸಿದಿದೆ ಎಂದು ವರದಿಯು ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಬ್ಲ್ಯುಡಬ್ಲ್ಯುಎಫ್ ಡೈರೆಕ್ಟರ್ ಜನರಲ್ ಮಾರ್ಕೊ ಲ್ಯಾಂಬರ್ಟಿನಿ, ಪ್ರಮುಖವಾಗಿ ಉಷ್ಣವಲಯದ ಪ್ರದೇಶಗಳಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ವಿನಾಶಕಾರಿ ಕುಸಿತದ ದತ್ತಾಂಶಗಳು ಸಿಕ್ಕಿವೆ. ಈ ಡೇಟಾಗಳಿಂದ ಸಂಸ್ಥೆಯು ʼಅತ್ಯಂತ ಚಿಂತಿತವಾಗಿದೆʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ವಿಜ್ಞಾನ ವಿಭಾಗದ ನಿರ್ದೇಶಕ ಮಾರ್ಕ್ ರೈಟ್, ಈ ಅಂಕಿಅಂಶಗಳು ʼನಿಜಕ್ಕೂ ಭಯಾನಕʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!