ಸ್ವಾತಂತ್ರ್ಯೋತ್ಸವದಂದೇ 5G ಸೇವೆಗಳು ಲಭ್ಯವಾಗಲಿದೆಯಾ?: ಹೀಗೊಂದು ನಿರೀಕ್ಷೆ ಹುಟ್ಟು ಹಾಕಿದೆ ರಿಲಯನ್ಸ್‌ ಜಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ಸದ್ಯ ಬಹುಚರ್ಚೆಯಲ್ಲಿರೋ 5ಜಿ ಸೇವೆಗಳನ್ನು ಹರಾಜಿನಲ್ಲಿ ವಿಜೇತನಾಗಿ ಹೊರಹೊಮ್ಮಿರುವ ರಿಲಯನ್ಸ್‌ ಜಿಯೋ ಕಂಪನಿಯು ಆಗಸ್ಟ್.‌15ರ ಸ್ವಾತಂತ್ರ್ಯೋತ್ಸವದಂದೇ ಪ್ರಾರಂಭಿಸಬಹುದು ಎಂಬ ನಿರೀಕ್ಷೆಗಳು ಈಗ ಹುಟ್ಟಿಕೊಂಡಿವೆ. ಇದಕ್ಕೆ ಪೂರಕವೆಂಬಂತೆ ಈ ವಾರದ ಆರಂಭದಲ್ಲಿ, ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಅಧ್ಯಕ್ಷ ಆಕಾಶ್ ಅಂಬಾನಿ ಅವರು ಭಾರತದಾದ್ಯಂತ 5G ರೋಲ್‌ಔಟ್‌ನೊಂದಿಗೆ ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸಲಿದ್ದಾರೆ ಎಂದು ಹೇಳಿದ್ದರು.

“ವಿಶ್ವದರ್ಜೆಯ 5G  ಸೇವೆಗಳನ್ನು ಕೈಗೆಟಕುವ ದರದಲ್ಲಿ ನೀಡಲು ಜಿಯೋ ಬದ್ಧವಾಗಿದೆ. ನಾವು ಸೇವೆಗಳು, ವೇದಿಕೆಗಳು ಮತ್ತು ಪರಿಹಾರಗಳನ್ನು ಒದಗಿಸುತ್ತೇವೆ, ಅದು ಭಾರತದ ಶಿಕ್ಷಣ, ಆರೋಗ್ಯ, ಕೃಷಿ, ಉತ್ಪಾದನೆ ಮತ್ತು ಇ-ಆಡಳಿತ ಕ್ಷೇತ್ರಗಳಲ್ಲಿ ಡಿಜಿಟಲ್ ಕ್ರಾಂತಿಯನ್ನು ವೇಗಗೊಳಿಸುತ್ತದೆ” ಎಂದು ಜಿಯೋ ಇನ್ಫೋಕಾಮ್‌ನ ಅಧ್ಯಕ್ಷ ಆಕಾಶ್ ಅಂಬಾನಿ ಹೇಳಿದ್ದಾರೆ.

“ರಾಷ್ಟ್ರವ್ಯಾಪಿ ಫೈಬರ್ ಉಪಸ್ಥಿತಿಯನ್ನು ಜಿಯೋ ಹೊಂದಿದ್ದು, ಅಡೆತಡೆಗಳಿಲ್ಲದ ಆಲ್-ಐಪಿ ನೆಟ್‌ವರ್ಕ್, ಸ್ಥಳೀಯ 5G ಸ್ಟಾಕ್ ಮತ್ತು ಬಲವಾದ ಜಾಗತಿಕ ಪಾಲುದಾರಿಕೆ ಹೊಂದಿರುವ ತಂತ್ರಜ್ಞಾನ ವ್ಯವಸ್ಥೆಯನ್ನು ಜಿಯೋ ಹೊಂದಿದ್ದು ಅತ್ಯಂತ ಕಡಿಮೆ ಅವಧಿಯಲ್ಲಿ 5G ಸೇವೆ ನೀಡಲು ಜೀಯೋ ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ಕಂಪನಿ ಹೇಳಿದೆ.

ಜಿಯೋ4G ಯ ವೇಗ, ಪ್ರಮಾಣ ಮತ್ತು ಸಾಮಾಜಿಕ ಪರಿಣಾಮವು ಜಗತ್ತಿನಲ್ಲಿ ಎಲ್ಲಿಯೂ ಸಾಟಿಯಿಲ್ಲದ್ದಾಗಿದೆ. ಈಗ, ದೊಡ್ಡ ಮಹತ್ವಾಕಾಂಕ್ಷೆ ಮತ್ತು ಬಲವಾದ ಸಂಕಲ್ಪದೊಂದಿಗೆ, ಜಿಯೋ ಭಾರತದ ಮೆರವಣಿಗೆಯನ್ನು 5G ಯುಗಕ್ಕೆ ಮುನ್ನಡೆಸಲು ಸಜ್ಜಾಗಿದೆ” ಎಂದಿರುವ ಆಕಾಶ್‌ ಅಂಬಾನಿಯವರ ಹೇಳಿಕೆಯು ಇದೀಗ ಜನಸಾಮಾನ್ಯರಲ್ಲಿ 5ಜಿ ಕುರಿತಾಗಿ ಬಲವಾದ ನಿರೀಕ್ಷೆಗಳನ್ನು ಹುಟ್ಟುಹಾಕುವಂತಿದೆ.

ಜಿಯೋ ತನ್ನ 5G ನೆಟ್‌ವರ್ಕ್ ಮುಂದಿನ ಪೀಳಿಗೆಯ ಡಿಜಿಟಲ್ ಪರಿಹಾರಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಅದು $ 5 ಟ್ರಿಲಿಯನ್ ಆರ್ಥಿಕತೆಯತ್ತ ಭಾರತದ AI ಚಾಲಿತ ನಡಿಗೆಗೆ ವೇಗ ನೀಡುತ್ತದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!