ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣ್‌ಬೀರ್ ಹಾಗೂ ಆಲಿಯಾ ಇನ್ನೇನು ಕೆಲವೇ ದಿನಗಳಲ್ಲಿ ಅವಳಿ ಮಕ್ಕಳ ಪೋಷಕರಾಗುತ್ತಾರೆ. ಆಲಿಯಾ ಭಟ್ ತನ್ನ ಪ್ರೆಗ್ನೆನ್ಸಿಯನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಆಲಿಯಾ ಭಟ್ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದು, ಈ ವರ್ಷ ಅವರಿಗೆ ಗೋಲ್ಡನ್ ವರ್ಷವಾಗಿತ್ತು. ತನ್ನ ಕೆರಿಯರ್‌ನ ಪೀಕ್‌ನಲ್ಲಿದ್ದಾಗಲೇ ಆಲಿಯಾ ಗರ್ಭಿಣಿಯಾಗಿದ್ದರು.
ಎಷ್ಟೊ ನಟಿಯರು ಮಗುವಿನ ನಂತರ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ, ಇನ್ನು ಕೆಲವರು ಬರುವುದೇ ಇಲ್ಲ. ಈ ಬಗ್ಗೆ ರಣ್‌ಬೀರ್ ಮಾತನಾಡಿದ್ದು, ಆಲಿಯಾ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಿನಿಮಾಗಳಿಗೆ ವಾಪಾಸಾಗುತ್ತಾರೆ. ಸಿನಿಮಾ ಬಿಟ್ಟು ಬಿಡ್ತಾರೆ ಅನ್ನೋದೆಲ್ಲಾ ಊಹಿಸೋಕೂ ಅಸಾಧ್ಯ. ಆಲಿಯಾಗೆ ಸಿನಿಮಾ ಜೀವನ ಎಂದು ಹೇಳಿದ್ದಾರೆ.