ತೆಲುಗು, ತಮಿಳಿಗೆ ಡಬ್‌ ಆಗಲಿದ್ಯಾ ಡಾಲಿ ನಟನೆಯ ‘ಬಡವ ರಾಸ್ಕಲ್’?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಡಾಲಿ ಧನಂಜಯ್‌ ಈಗ ದಕ್ಷಿಣ ಭಾರತದ ಬಹುಬೇಡಿಕೆಯ ನಟರಾಗಿದ್ದಾರೆ. ಈಗಾಗಲೇ ಯುವರತ್ನ, ಪೊಗರು, ಪುಷ್ಪ, ಸಲಗ, ರತ್ನನ್‌ ಪ್ರಪಂಚ ಸೇರಿ ಹಲವು ಬ್ಲಾಕ್‌ ಬ್ಯಾಸ್ಟರ್‌ ಹಿಟ್‌ ಸಿನಿಮಾ ಮೂಲಕ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಡಾಲಿ ಧನಂಜಯ್‌ ಗೆ 2021ಕ್ಕೆ ತಮ್ಮ ಸಿನಿ ಜರ್ನಿಯಲ್ಲಿ ಲಕ್ಕಿ ಇಯರ್‌ ಆಗಿತ್ತು. ಡಾಲಿ ಅವರ ಮೋಸ್ಟ್‌ ಹಿಟ್‌ ಸಿನಿಮಾ ಬಡವ ರಾಸ್ಕಲ್‌ ಈಗ ಟಾಲಿವುಡ್‌ ಹಾಗೂ ಕಾಲಿವುಡ್ ಗೂ ಕಾಲಿಡಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಪುಷ್ಪ ಚಿತ್ರ ಹಿಟ್‌ ಆದ ಬಳಿಕ ಡಾಲಿಗೆ ತೆಲುಗು ನಾಡಿನಲ್ಲಿ ಅಭಿಮಾನಿಗಳು ಹೆಚ್ಚಾಗಿದ್ದು, ಬಡವ ರಾಸ್ಕಲ್‌ ಚಿತ್ರ ತೆಲುಗು ಭಾಷೆಗೆ ಡಬ್‌ ಆಗಲಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಸದ್ಯ ಸಿನಿ ಪರದೆಯ ಮೇಲೆ ಧೂಳೆಬ್ಬಿಸಿದ ಬಡವ ರಾಸ್ಕಲ್‌ ಇಂದು ಒಟಿಟಿಯಲ್ಲಿ ರಿಲೀಸ್‌ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!