ರಾಜ್ಯದಲ್ಲಿ ಬಾಂಬೆ ಮಿಠಾಯಿ, ಗೋಬಿ ಮಂಚೂರಿ ಬ್ಯಾನ್ ಆಗುತ್ತಾ? ನಾಳೆ ಮಹತ್ವದ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಬಾಂಬೆ ಮಿಠಾಯಿ, ಗೋಬಿ ಮಂಚೂರಿ ನಿಷೇಧ..? ಈ ಕುರಿತು ಆರೋಗ್ಯ ಸಚಿವರು ಮಹತ್ವದ ಮಾಹಿತಿ ನೀಡಿದ್ದಾರೆ. ಗೋಬಿ ಮಂಚೂರಿ, ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಅಂಶ ಇದೆ ಎಂದು ಪರಿಗಣಿಸಲಾಗಿದೆ. ಈ ವರದಿ ಇದೀಗ ಆರೋಗ್ಯ ಇಲಾಖೆ ಬಳಿ ಇದ್ದು ನಾಳೆ ಪ್ರಕಟವಾಗುವ ನಿರೀಕ್ಷೆ ಇದೆ.

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ನು ಬೇರೆ ರಾಜ್ಯಗಳಲ್ಲಿ ಈಗಾಗಲೇ ನಿಷೇಧಿಸಲಾಗಿದೆ. ಇದಕ್ಕೆ ಕಾರಣ ನಕಲಿ ಬಣ್ಣಗಳ ಬಳಕೆ ಮತ್ತು ಕ್ಯಾನ್ಸರ್ ಅಂಶಗಳ ಪತ್ತೆ. ಆಹಾರ ಮತ್ತು ಸುರಕ್ಷತೆ ಇಲಾಖೆಯು ನಮ್ಮ ರಾಜ್ಯದ ಹೋಟೆಲ್‌ಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಂದ ಕ್ಯಾಂಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದೆ.

ಈ ಪರೀಕ್ಷೆಯು ಕ್ಯಾನ್ಸರ್ ಅಂಶವನ್ನು ಪತ್ತೆಹಚ್ಚಿದೆ. ಕಾಟನ್ ಕ್ಯಾಂಡಿಯಲ್ಲಿ ರಂಡೋಮನ್ ಬಿ ಕಂಡುಬಂದಿದೆ. ಇದರ ಜೊತೆಗೆ, ಗೋಬಿ-ಮಂಚೂರಿಯಲ್ಲಿ ಹರಡಿರುವ ಬಣ್ಣದ ಜಲ್ಲಿಗಳಲ್ಲಿ ಕ್ಯಾನ್ಸರ್ ಕಾರಕ ಇರೋದು ವರದಿಗಳಲ್ಲಿ ತೋರಿಸಿವೆ. ಹೀಗಾಗಿ ರಾಜ್ಯದಲ್ಲೂ ನಿಷೇಧಾಜ್ಞೆ ಜಾರಿಯಾಗುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!