ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಹಸ್ತಾಂತರಿಸುತ್ತೀರಾ?: ಎದುರಾದ ಪ್ರಶ್ನೆಗೆ ಪಾಕ್ ಸಚಿವ ಭುಟ್ಟೋ ಉತ್ತರವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಕೌನ್ಸಿಲ್ ಸಭೆಗಾಗಿ ಗೋವಾಕ್ಕೆ ಆಗಮಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದರು. ಈ ವೇಳೆ ಅವರಿಗೆ ಪ್ರಶ್ನೆಒಂದು ಎದುರಾಗಿದ್ದು, ಅದೇನೆಂದರೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಭಾರತಕ್ಕೆ ಹಸ್ತಾಂತರಿಸುತ್ತೀರಾ? ಎಂದು.

ಹೌದು, ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾತನಾಡಿದರು. ಈ ವೇಳೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಭಾರತಕ್ಕೆ ಹಸ್ತಾಂತರಿಸುತ್ತೀರಾ? ಕೇಳಿದಾಗ , ಕರಾಚಿ ಮೂಲದ ಭೂಗತ ಡಾನ್ ದಾವೂದ್ ಇಬ್ರಾಹಿಂನ ಹಸ್ತಾಂತರವು ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹೆಚ್ಚಿರುವ ಅಶಾಂತಿಯು ಆಗಸ್ಟ್ 5, 2019 ರಂದು ಭಾರತದ ಕ್ರಮದ (ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವ) ಪರಿಣಾಮವಾಗಿದೆ. ಆ ಸಮಯದಲ್ಲಿ, ಭಾರತ ಏಕಪಕ್ಷೀಯವಾಗಿ ಅಂತಾರಾಷ್ಟ್ರೀಯ ಕಾನೂನು, ನಿರ್ಣಯಗಳು ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ಹೇಳಿದರು.

ನಾವು ಯಾವುದೇ ಬದ್ಧತೆಯನ್ನು ಪೂರೈಸಲು ಬಯಸಿದರೆ ಅಥವಾ ನಾವು ಎರಡೂ ದೇಶಗಳ ನಡುವೆ ಯಾವುದೇ ಮಾತುಕತೆ ನಡೆಸಲು ಬಯಸಿದರೆ, ಲಿಖಿತ ದಾಖಲೆಗಳು ಅಥವಾ ಲಿಖಿತ ಒಪ್ಪಂದಗಳು ಇರುತ್ತವೆ. ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಒಪ್ಪಂದಗಳಿಗೆ ಭಾರತದ ಬದ್ಧತೆಯನ್ನು ಪಾಕಿಸ್ತಾನ ನಂಬುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!