ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಕ್ರಿಕೆಟರ್ಗಳ ಮಹೇಂದ್ರ ಸಿಂಗ್ ಧೋನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರೂ ,ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಆದ್ರೆ 2023ರ ಐಪಿಎಲ್ ಮಾಹಿಯ ಕೊನೆಯ ಆವೃತ್ತಿ ಎಂದೇ ಸುದ್ದಿಯಾಗಿತ್ತು. ಆದರೆ ಧೋನಿ ತಮ್ಮ ಫಿಟ್ನೆಸ್ ಜೊತೆಗೆ ರಾಜಿ ಮಾಡಿಕೊಳ್ಳದೇ ಮುಂದಿನ ಬಾರಿಯೂ ಆಡುವ ಬಯಕೆಯಿದೆ ಎಂದು ಪ್ರಶಸ್ತಿ ಗೆದ್ದ ನಂತರ ಹೇಳಿದ್ದರು. ಇದೀಗ 2024 ಐಪಿಎಲ್‌ನಲ್ಲಿ ಆಡ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆಮಾಡಿದೆ.
ಇತ್ತ ಸಂದರ್ಶನದಲ್ಲಿ ಮುಂದಿನ ಐಪಿಎಲ್‌ನಲ್ಲಿ ಆಡುವ ಬಗ್ಗೆ ಕೇಳಿದಾಗ, “ನನ್ನ ಕೈಲಾದಷ್ಟು ಆಡಲು ಪ್ರಯತ್ನಿಸುತ್ತೇನೆ. ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಎಲ್ಲವೂ ಸರಿಯಾಗಿ ನಡೆದರೆ ಖಂಡಿತವಾಗಿಯೂ ಆಡುತ್ತೇನೆ. ಆದರೆ, ನಾನು ಫಿಟ್ ಆಗಿಲ್ಲದೇ ಇದ್ದರೆ ಪ್ರೇಕ್ಷಕರೊಂದಿಗೆ ಐಪಿಎಲ್ ಪಂದ್ಯ ನೋಡುತ್ತೇನೆ” ಎಂದರು.
ಜೂನ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ. ಕ್ಯಾಚ್ ವೇಳೆ ಧೋನಿ ಮೊಣಕಾಲಿನ ಗಾಯಕ್ಕೆ ಒಳಗಾದರು. ನಂತರ ಅವರು ಆಡಲು ಸಾಕಷ್ಟು ತೊಂದರೆಗಳನ್ನು ಎದುರಿಸಿದರು. ಆದರೂ ಧೋನಿ ಐಪಿಎಲ್‌ನ ಒಂದೇ ಒಂದು ಪಂದ್ಯವನ್ನೂ ಮಿಸ್ ಮಾಡಿರಲಿಲ್ಲ. ಈಗ 2024ರ ವೇಳೆಗೆ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಅಭಿಮಾನಿಗಳು ಗಮನಿಸುತ್ತಿದ್ದಾರೆ. ಅಲ್ಲದೇ ನಿವೃತ್ತಿಗೆ ಇದೇ ಸರಿಯಾದ ಸಮಯ ಎಂದು ಧೋನಿ ಹೇಳಿದ್ದರು.