ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ನಲ್ಲಿ ಬ್ಯುಸಿಯಾಗಿರುವ ಕ್ರೇಜಿ ಹೀರೋಯಿನ್ ಗಳಲ್ಲಿ ಶ್ರುತಿ ಹಾಸನ್ ಕೂಡ ಒಬ್ಬರು. ನಟಿ, ಸಂಗೀತ ನಿರ್ದೇಶಕಿ, ಗಾಯಕಿಯಾಗಿ ಫೇಮಸ್ ಆಗಿರುವ ಬ್ಯೂಟಿ ಶ್ರುತಿ ಹಾಸನ್ ರಾಜಕೀಯಕ್ಕೂ ಬರ್ತಾರಾ ಎಂಬ ಸುದ್ದಿ ಜೋರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಈಕೆ ಯಾವುದೇ ವಿಷಯದ ಬಗ್ಗೆ ಕಡ್ಡಿ ತುಂಡಾದಂತೆ ಮಾತಾಡುತ್ತಾರೆ. ಈಗ ರಾಜಕೀಯಕ್ಕೆ ಬರುವ ವಿಚಾರಕ್ಕೆ ಖಡಕ್ಕಾಗಿ ಉತ್ತರಿಸುವ ಶೃತಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಇವರ ತಂದೆ ಕಮಲ್ ಹಾಸನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟದ್ದಲ್ಲದೆ, ಮಕ್ಕಳ್ ಇಯಕ್ಕಂ ಪಕ್ಷದ ಅಧ್ಯಕ್ಷರೂ ಆಗಿದ್ದಾರೆ. ಕಮಲ್ ಹಾಸನ್ ಅವರ ಉತ್ತರಾಧಿಕಾರಿಯಾಗಿರುವುದರಿಂದ ಶೃತಿ ಅವರ ರಾಜಕೀಯ ಪ್ರವೇಶದ ಬಗ್ಗೆ ಪದೇ ಪದೇ ಪ್ರಶ್ನೆ ಬರುತ್ತಿತ್ತು. ಇತ್ತೀಚೆಗಷ್ಟೇ ಕೊಯಮತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸುತ್ತಿದ್ದಾಗಲೂ ಶ್ರುತಿ ಹಾಸನ್‌ಗೆ ಈ ಪ್ರಶ್ನೆ ಮತ್ತೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ನಟಿ ಸದ್ಯ ರಾಜಕೀಯ ಸೇರುವ ಆಸಕ್ತಿ ಇಲ್ಲ ಎಂದರು.
ಸಿನಿಮಾದಲ್ಲಿ ನಟಿಸುತ್ತೇನೆ, ಯಾವುದೇ ಸಂದರ್ಭದಲ್ಲೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟರು. ಸದ್ಯ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಟಿಸುತ್ತಿರುವ ಈಕೆ ಪ್ರಭಾಸ್ ಎದುರು ಪಾನ್ ಇಂಡಿಯಾ ಸಿನಿಮಾ ಸಲಾರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ಹಾಲಿವುಡ್‌ನಲ್ಲಿ ಮೊದಲ ಬಾರಿಗೆ ದಿ ಐ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.