ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿನ ದರ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಪ್ರತೀ ಹಾಲಿನ ಲೀಟರ್‌ಗೆ ಐದು ರೂಪಾಯಿಯಷ್ಟು ಹೆಚ್ಚಳ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ. ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಹಾಗೂ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಸಂಬಂಧಪಟ್ಟ ಸಚಿವರೊಂದಿಗೆ ಸಭೆ ನಡೆಸಲಿದ್ದು, ಹಾಲಿನ ದರ ಏರಿಕೆ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ.
ಮೇವು, ಆಹಾರ, ಕೂಲಿ ಸೇರಿ ಇತರೇ ಖರ್ಚುಗಳು ಹೆಚ್ಚಾಗಿರುವುದರಿಂದ ಪ್ರತಿ ಲೀ. ಹಾಲಿಗೆ 5 ರೂ. ನಂತೆ ದರ ಹೆಚ್ಚಳ ಮಾಡಲು ವಿವಿಧ ಹಾಲು ಒಕ್ಕೂಟಗಳು ಪಶುಸಂಗೋಪನೆ ಸಚಿವ ವೆಂಕಟೇಶ್ ಅವರಿಗೆ ಒತ್ತಾಯಿಸಿದ್ದವು. ಈ ಹಿನ್ನೆಲೆ ದರ ಹೆಚ್ಚಳ ಪ್ರಸ್ತಾಪವಾಗಿದ್ದು, ಸರ್ಕಾರದ ಅನುಮತಿ ಬಾಕಿಯಿದೆ