Saturday, September 23, 2023

Latest Posts

ಬಾಲಿವುಡ್‌ನ ಈ ಸ್ಟಾರ್ ಡೈರೆಕ್ಟರ್ ಜತೆ ಕೆಲಸ ಮಾಡಲಿದ್ದಾರಾ ರಶ್ಮಿಕಾ ಮಂದಣ್ಣ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಶ್ಮಿಕಾ ಮಂದಣ್ಣ ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. ನಟರು ಹಾಗೂ ನಿರ್ದೇಶಕರು ರಶ್ಮಿಕಾ ಜೊತೆ ಕೆಲಸ ಮಾಡೋದಕ್ಕೆ ಉತ್ಸುಕರಾಗಿದ್ದಾರೆ. ಇದೀಗ ರಶ್ಮಿಕಾ ಕರಣ್ ಜೋಹರ್ ನಿರ್ದೇಶನದ ಸಿನಿಮಾಕ್ಕೆ  ಹೀರೋಯಿನ್ ಆಗಿದ್ದಾರಾ ಎನ್ನುವ ಸಂಶಯ ಎದ್ದಿದೆ. ಇದಕ್ಕೆ ಕಾರಣ ಕೂಡ ಇದೆ. ನಿನ್ನೆಯಷ್ಟೇ ರಶ್ಮಿಕಾ ಧರ್ಮ ಪ್ರೊಡಕ್ಷನ್ ಆಫೀಸ್ ಬಳಿ ಕಾಣಿಸಿಕೊಂಡಿದ್ದಾರೆ.

ಧರ್ಮ ಪ್ರೊಡಕ್ಷನ್‌ನಲ್ಲಿ ಒಂದು ಸಿನಿಮಾ ಮಾಡಬೇಕು ಅನ್ನೋದು ಎಷ್ಟೋ ನಟ-ನಟಿಯರ ಕನಸು. ರಶ್ಮಿಕಾ ಕರಣ್ ಜೋಹರ್ ಆಫೀಸ್ ಮುಂದೆ ಕಾಣಿಸಿದ್ದು, ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಹಿಂದೆ ಪುಷ್ಪಾ ನೋಡಿದ ಕರಣ್ ಜೋಹರ್ ಕೂಡ ಸಿನಿಮಾ ಸಖತ್ ಆಗಿದೆ ಎಂದು ಹೇಳಿದ್ದರು. ಈಗಾಗಲೇ ಬಾಲಿವುಡ್‌ನ ಎರಡು ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ. ಇನ್ನೂ ಸಾಲು ಸಿನಿಮಾಗಳು ಕೈಯಲ್ಲಿವೆ ಎಂದೂ ಹೇಳಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!