ಏಕದಿನದಲ್ಲೂ ನಾಯಕತ್ವ ಕಳೆದುಕೊಳ್ತಾರಾ ರೋಹಿತ್ ಶರ್ಮಾ ? ಈ ಕುರಿತು BCCI ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೆಸ್ಟ್ ಕ್ರಿಕೆಟ್‌ನಿಂದ ರೋಹಿತ್ ಶರ್ಮಾ ಹಠಾತ್ತನೆ ನಿವೃತ್ತಿ ಘೋಷಿಸಿದ್ದು, ಈ ನಡುವೆ ಅವರ ಏಕದಿನ (ODI) ನಾಯಕತ್ವಕ್ಕೂ ಕಂಟಕ ಉಂಟಾಗಬಹುದು ಎಂಬ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ಉಂಟಾಗಿವೆ.

ಈಗ ರೋಹಿತ್ ಶರ್ಮಾ ಭಾರತದ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಆದ್ದರಿಂದ, ಬಿಸಿಸಿಐ ಮತ್ತು ಆಯ್ಕೆದಾರರು ಅವರ ಸ್ಥಾನದಲ್ಲಿ ಹೊಸ ಆರಂಭಿಕ ಆಟಗಾರನನ್ನು ಹುಡುಕಬೇಕಾಗಿದೆ.

ಬಿಸಿಸಿಐ ತನ್ನ ‘ಎಕ್ಸ್’ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಧನ್ಯವಾದಗಳು ನಾಯಕ, ಬಿಳಿ ಜೆರ್ಸಿಯಲ್ಲಿ ಒಂದು ಯುಗ ಕೊನೆಗೊಂಡಿದೆ. ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಹಿಟ್‌ಮ್ಯಾನ್, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ಎಂದು ಬಿಸಿಸಿಐ ಪೋಸ್ಟ್ ಮಾಡಿದೆ.

ಈ ಪೋಸ್ಟ್ ಬಳಿಕ ಅವರು ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಮುಂದುವರೆಯುವುದು ಮಾತ್ರವಲ್ಲ ನಾಯಕರಾಗಿಯೂ ಇರಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here