ಆಪರೇಶನ್ ಸಿಂದೂರಕ್ಕೆ ಪ್ರತೀಕಾರ ತೀರಿಸಲು ಪಾಕ್ ಹಿಟ್ ಲೀಸ್ಟ್‌ನಲ್ಲಿದ್ದ ಭಾರತದ ಆ 15 ನಗರ ಯಾವುದು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಆಪರೇಷನ್ ಸಿಂದೂರದ ಪರಿಣಾಮ ಜಾಗತಿಕವಾಗಿ ಮುಖಭಂಗಕ್ಕೊಳಗಾಗಿರುವ ಪಾಕ್, ಇದಕ್ಕೆ ಪ್ರತಿಯಾಗಿ ಭಾರತದ 15 ನಗರಗಳನ್ನು ಟಾರ್ಗೆಟ್ ಮಾಡಿ ಕ್ಷಿಪಣಿ ದಾಳಿಗೆ ಯತ್ನಿಸಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

ಚಂಡೀಗಢ, ಆವಂತಿಪೊರ, ಜಲಂಧರ್, ಲೂಧಿಯಾನ, ಅಮೃತಸರ, ಪಠಾಣಕೋಟ್, ಕಪೂರ್ತಲಾ, ನಲ, ಫಲೋಡಿ, ಉತ್ತರಲೈ, ಭುಜ್, ಜಮ್ಮು, ಶ್ರೀನಗರ, ಆಧಂಪುರ, ಭಟಿಂಡಾಗಳನ್ನು ಪಾಕ್ ತನ್ನ ಹಿಟ್‌ಲಿಸ್ಟ್‌ನಲ್ಲಿಟ್ಟು ದಾಳಿಗೆ ಮುಂದಾಗಿದ್ದು, ತನ್ನ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯ ಮೂಲಕ ಭಾರತ ಈ ಎಲ್ಲಾ ದಾಳಿಗಳನ್ನು ಮಟ್ಟಹಾಕಿದೆ.

ಪಾಕಿಸ್ತಾನದ ಕ್ಷಿಪಣಿಗಳ ಅವಶೇಷಗಳನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದ್ದು, ಲಾಹೋರ್‌ನ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ಕೂಡಾ ಭಾರತ ನಾಶಪಡಿಸಿದ ಪೋಟೋಗಳು ಈಗ ವೈರಲ್ ಆಗಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!