ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಖ್ಯಾತ ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸುವಂತೆ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಅವರನ್ನು ನಿಷೇಧಿಸಬೇಕು. ಕನ್ನಡ ಪ್ರತಿಭೆಗಳಿಗೆ ಚಿತ್ರ ಗಾಯನದಲ್ಲಿ ಅವಕಾಶ ಕೊಡಬೇಕು. ಅನ್ಯ ಭಾಷೆಯ ಗಾಯಕರನ್ನು ಹಾಡಿಸುವುದನ್ನು ನಿಲ್ಲಿಸಬೇಕು. ನಿರ್ಮಾಪಕರು ಸೋನು ನಿಗಮ್ ಗೆ ಅವಕಾಶ ನೀಡಬಾರದು ಎಂಬುದಾಗಿ ಒತ್ತಾಯಿಸಿದರು.
____ ಕೋಟಿ ಕನ್ನಡಿಗರ ಪರ ನಿರ್ಧಾರ ತೆಗೆದುಕೊಳ್ಳಲು ಈತ ರಾಜಕೀಯ ವ್ಯಕ್ತಿ.ಎಲ್ಲಾ ತನ್ನ ಸ್ವಾರ್ಥ ಸಾಧನೆಗಾಗಿ ಕನ್ನಡ ಹೋರಾಟಗಾರನ ಮುಖವಾಡ.ಕನ್ನಡಕ್ಕೆ ಈತನ ಕೊಡುಗೆ ಶೂನ್ಯ. ಅದಕ್ಕಿಂತ ಹೆಚ್ಚಾಗಿ ಈತ ಹುಟ್ಟು ಕನ್ನಡಿಗನಲ್ಲ.ಈತನ ಹೋರಾಟ ಗಳೆಲ್ಲಾ ನಕಲಿ.