Sunday, October 2, 2022

Latest Posts

ಹೈಡ್ರೋಜನ್‌ ಖಾಲಿಯಾಗುತ್ತಿದ್ದಂತೆ ಬುಧ, ಶುಕ್ರ ಗ್ರಹಗಳನ್ನೇ ನುಂಗುತ್ತಾನೆ ಸೂರ್ಯ! ಹಾಗಿದ್ದರೆ ಭೂಮಿಯ ಕತೆಯೇನು!?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಮ್ಮ ಬ್ರಹ್ಮಾಂಡ, ಸೂರ್ಯನ ಆಯಸ್ಸು, ಭೂಮಿಯ ಅಸ್ತಿತ್ವ ಕುರಿತಾಗಿ ಹಲವಾರು ಆಸಕ್ತಿಕಕರ ವಿಚಾರಗಳು ಆಗಾಗ್ಯೆ ಸಂಶೋಧನೆಗಳಿಂದ ತಿಳಿದು ಬರುತ್ತಿರುತ್ತವೆ. ಇದೀಗ ವಿಜ್ಞಾನಿಗಳು ಅಂತಹದ್ದೇ ಒಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಆದರೆ ಈ ಬಾರಿ ವಿಜ್ಞಾನಿಗಳು ಹೇಳಿರುವ ವಿಚಾರ ಆತಂಕಕಾರಿಯಾಗಿದೆ. ಏಕೆಂದರೆ ಇದು ಭೂಮಿಯ ಆಯಸ್ಸಿಗೆ ಸಂಬಂಧಿಸಿದ್ದಾಗಿದೆ!.
ಭೂಮಿಯ ಮೇಲಿನ ಜೀವಿಗಳ ಜೀವನವನ್ನು ಜೀವಂತವಾಗಿಟ್ಟಿರುವವನೇ ಬೆಂಕಿಯ ಉಂಡೆ ಸೂರ್ಯ. ಹೈಡ್ರೋಜನ್ ಇಂಧನದ ಶಕ್ತಿಯಿಂದ ತನ್ನನ್ನು ತಾನು ಉರಿಸಿಕೊಳ್ಳುತ್ತಾ ಬೆಳಕು- ಶಕ್ತಿಯನ್ನು ನೀಡುತ್ತಿದ್ದಾನೆ. ಸುಮಾರು ಐದು ಶತಕೋಟಿ ವರ್ಷಗಳ ಬಳಿಕ ಸೂರ್ಯನಲ್ಲಿನ ಇಂಧನ ಖಾಲಿಯಾಗುತ್ತಿದ್ದಂತೆ ಆತ ಕೆಂಪು ದೈತ್ಯ ನಕ್ಷತ್ರವಾಗಿ ಆಗಿ ಬದಲಾಗುತ್ತಾನೆ. ಆಗ ಸೂರ್ಯ ತನ್ನ ಜೀವ ಉಳಿಸಿಕೊಳ್ಳಲು ನೆರೆಹೊರೆಯ ಸೌರವ್ಯೂಹದಲ್ಲಿ ಬೇಟೆಗೆ ಹೊರಡುತ್ತಾನೆ. ಇನ್ನೊಂದು 4 ರಿಂದ 5 ಶತಕೋಟಿ ವರ್ಷಗಳ ನಂತರ, ಸೂರ್ಯನು ಕೆಂಪು ದೈತ್ಯನಾಗಿ ಉಬ್ಬಿಕೊಂಡಾಗ ತನ್ನ ವಿಕಾಸದ ಮುಂದಿನ ಹಂತವನ್ನು ಪ್ರವೇಶಿಸುತ್ತಾನೆ. ಅದು ಸಂಭವಿಸಿದಾಗ, ಬುಧ ಮತ್ತು ಶುಕ್ರವು ಗ್ರಹವನ್ನು ಖಂಡಿತವಾಗಿಯೂ ನುಂಗಿ ಹಾಕುತ್ತಾನೆ. ಹಾಗಿದ್ದರೆ ಭೂಮಿಯ ಕತೆ ಏನು?

ಈ ಬಗ್ಗೆ ರಾಯಲ್ ಆಸ್ಟ್ರೋನಾಮಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ವಿವರವಾದ ವಿವರಣೆ ನೀಡಲಾಗಿದೆ. ಸೂರ್ಯನು ಈ ಎರಡು ಗ್ರಹಗಳನ್ನು ನುಂಗಿದಾಗ ಹಲವಾರು ಸಾವಿರ ವರ್ಷಗಳವರೆಗೆ ಮತ್ತಷ್ಟು ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಾನೆ. ವಿಕಸನಗೊಂಡ ಆತ ತನ್ನ ಮೊದಲಿನ ಗಾತ್ರಕ್ಕಿಂತ ಸಾವಿರಾರು ಪಟ್ಟು ದೊಡ್ಡ ಗಾತ್ರದವನಾಗಬಹುದು. ಈ ಸ್ಥಿತಿಯು ಖಂಡಿತವಾಗಿಯೂ ಭೂಮಿಯ ಮೇಲೆ ಪರಿಣಾಮ ಬೀರುತ್ತದೆ. ಸೂರ್ಯನು ಭೂಮಿಯನ್ನು ನುಂಗುವ ಸನ್ನಿವೇಶ ಉದ್ಭವಿಸುವ ಮುನ್ನವೇ, ಭೂಮಿಯಲ್ಲಿ ಸಾಕಷ್ಟು ವಿನಾಶಗಳು ಸಂಭವಿಸಿರುತ್ತವೆ. ಆದರೆ ಅಷ್ಟರಲ್ಲಾಗಲೇ ಭೂಮಿಯ ಮೇಲಿನ ಜೀವಿಗಳು ಭೂಮಿಯಿಂದ ದೂರ ಸಾಗಿರಬಹುದು ಎಂಬುದು ಸಂಶೋಧಕರ ಆಶಾಭಾವ.
ಸಂಶೋಧನೆಗಳ ಪ್ರಕಾರ ಸೂರ್ಯನು ಅಂದಾಜು 4.57 ಶತಕೋಟಿ ವರ್ಷಗಳ ವಯಸ್ಸನ್ನು ಹೊಂದಿದ್ದಾನೆ. ಹೀಗೆ ನೋಡುವುದಾದರೆ ಆತ ಈಗ ಮಧ್ಯವಯಸ್ಕನಾಗಿದ್ದಾನೆ. ಹೈಡ್ರೋಜನ್ ಅನ್ನು ಹೀಲಿಯಂಗೆ ಬೆಸೆಯುತ್ತ ಜೀವಿಸುತ್ತಿದ್ದಾನೆ. ಆತನಿಗೆ ವಯಸ್ಸಾಗುತ್ತಾ ಬಂದಂತೆ  ಕೆಂಪು ದೈತ್ಯ ನಕ್ಷತ್ರವಾಗಿ ಮಾರ್ಪಾಡಾಗುತ್ತಾನೆ. ಹೈಡ್ರೋಜನ್ ಮತ್ತು ಹೀಲಿಯಂ ಸಮ್ಮಿಳನ ಪ್ರಕ್ರಿಯೆಯಲ್ಲಿ ಮಾರ್ಪಾಡುಗಳು ಸಂಭವಿಸಿದಾಗ ಆತನ ತಾಪವು ಕಡಿಮೆ ಆಗುತ್ತದೆ. ಅಲ್ಲಿಂದಾಚೆಗೆ ನಮ್ಮ ಸೌರಮಂಡಲ ಹಿಂದಿನಂತೆಯೇ ಉಳಿದಿರುವುದಿಲ್ಲ ಎಂಬುದು ವಿಜ್ಷಾನಿಗಳ ತರ್ಕ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!