ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿಯವರು ಸಿಎಂ ಸ್ಥಾನ ಬಿಟ್ಟು ಕೊಡುವ ಬಗ್ಗೆ ಹೇಳಿಕೆ ನೀಡಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಸಚಿವ ಕೆ.ಎನ್ ರಾಮಣ್ಣ ಮಾತನಾಡಿದ್ದಾರೆ.
ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ಬಿಟ್ಟು ಕೊಡ್ತಾರೆ ನಡೀರಿ. ಅವರು ಕೇಳಿದ ತಕ್ಷಣ ಬಿಟ್ಟು ಕೊಡೋಕೆ ಆಗುತ್ತಾ?. ಈಗ ಅವರು ಸ್ವಾಮೀಜಿ ಸ್ಥಾನ ಬಿಟ್ಟು ಕೊಡುತ್ತಾರಂತಾ ಎಂದು ಪ್ರಶ್ನಿಸಿದರು.
ಸ್ವಾಮೀಜಿ ಅವರ ಸ್ಥಾನ ಬಿಟ್ಟು ಕೊಡ್ತಾರಾ ಕೇಳಿ. ನಾಳೆಯಿಂದ ನಾನೇ ಸ್ವಾಮೀಜಿ ಆಗ್ತೀನಿ. ನಾನು ಖಾವಿ ಬಟ್ಟೆ ಹಾಕುತ್ತೇನೆ. ಅವರು ಬಿಟ್ಟು ಕೊಡಲ್ಲ, ಇವರು ಬಿಟ್ಟು ಕೊಡಲ್ಲ ಎಂದರು