Monday, November 3, 2025

ಕಸ ಎಸೆದು ಓಡಿ ಹೋದ್ರೆ ಬಿಡ್ತಾರಾ? ಮನೆ ಮುಂದೆಯೇ ಕಸ ಸುರಿದ BSWML ಸಿಬ್ಬಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಸ್ತೆಗೆ ತ್ಯಾಜ್ಯ ಎಸೆದವರಿಗೆ ತಕ್ಕ ಪಾಠ ಕಲಿಸಲು ಬಿಎಸ್‌ಡಬ್ಲ್ಯೂಎಂಎಲ್‌ ಸಿಬ್ಬಂದಿ ಅವರು ಹಾಕಿದ ಕಸವನ್ನು ಅವರ ಮನೆ ಮುಂದೆಯೇ ಸುರಿದು 100 ರೂ. ದಂಡ ವಿಧಿಸಿದ್ದಾರೆ.

ಬೆಂಗಳೂರಿನ ದತ್ತಾತ್ರೇಯ ಟೆಂಪಲ್ ರಸ್ತೆ, ಬನಶಂಕರಿ ಸೆಕೆಂಡ್ ಸ್ಟೇಜ್‌ನಲ್ಲಿ ನಿವಾಸಿಗಳು ಮನೆ ಮುಂದೆ ಆಟೋ ಬಂದರೂ ಕೂಡ ಕಸ ಹಾಕದೇ, ಕಸವನ್ನು ರಸ್ತೆಗೆ ಎಸೆಯುತ್ತಿದ್ದರು. ಇದನ್ನು ಗಮನಿಸಿದ ಬಿಎಸ್‌ಡಬ್ಲ್ಯೂಎಂಎಲ್‌ ಸಿಬ್ಬಂದಿ ಅದೇ ಕಸವನ್ನು ಎತ್ತಿಕೊಂಡು ಹಾಕಿದವರ ಮನೆ ಮುಂದೆಯೇ ಸುರಿದು, 100 ರೂ. ದಂಡ ಹಾಕಿದ್ದಾರೆ.

ಈ ಮೂಲಕ ನಿವಾಸಿಗಳಿಗೆ ಬಿಎಸ್‌ಡಬ್ಲ್ಯೂಎಂಎಲ್‌ ಸಿಬ್ಬಂದಿ ಪಾಠ ಕಲಿಸುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

error: Content is protected !!