July 14, 2026
Tuesday, July 14, 2026
spot_img

ಖರೀದಿಗೆ ಇದೇ ಪರ್ಫೆಕ್ಟ್ ಟೈಮ್: ಚಿನ್ನ-ಬೆಳ್ಳಿ ದರದಲ್ಲಿ ಕುಸಿತ, ಗ್ರಾಂಗೆ 265 ರೂ. ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಗಾದಿ ಹಬ್ಬದ ದಿನವೇ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಖರೀದಿ ಅವಕಾಶ ಒದಗಿಸಿದೆ. ಇಂದು ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು 265 ರೂ ಇಳಿಕೆಯಾಗಿದ್ದು, ಕಳೆದ ಹತ್ತು ದಿನಗಳಲ್ಲಿ ಒಟ್ಟು 700 ರೂಗೂ ಹೆಚ್ಚು ಕುಸಿತ ದಾಖಲಾಗಿದೆ.

ಮಾರ್ಚ್ ತಿಂಗಳ ಆರಂಭದಿಂದಲೂ ದರ ಇಳಿಕೆ ಮುಂದುವರಿದಿದ್ದು, 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 17,000 ರೂಗಳಷ್ಟು ಕಡಿತವಾಗಿದೆ. ಪ್ರಸ್ತುತ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 1,41,750 ರೂ ಆಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ 1,54,640 ರೂ ಇದೆ.

ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡುಬಂದಿದ್ದು, ಈ ತಿಂಗಳಲ್ಲಿ 315 ರೂ ಇಂದ 260 ರೂ ಪ್ರತಿ ಗ್ರಾಂ ಮಟ್ಟಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿ ದರ 26,000 ರೂ ಆಗಿದೆ.

ಇದನ್ನೂ ಓದಿ:

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ 15,464 ರೂ, 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ 14,175 ರೂ,18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ 11,598 ರೂ ಆಗಿದೆ.

ಚೆನ್ನೈ, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿಯೂ ಚಿನ್ನದ ದರದಲ್ಲಿ ಸಣ್ಣ ಮಟ್ಟದ ವ್ಯತ್ಯಾಸ ಕಂಡುಬರುತ್ತಿದೆ. ಹಬ್ಬದ ಸಂದರ್ಭದಲ್ಲಿ ದರ ಇಳಿಕೆಯ ಹಿನ್ನೆಲೆ, ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಎಂದು ವ್ಯಾಪಾರ ವಲಯ ಅಭಿಪ್ರಾಯಪಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !