October 9, 2026
Friday, October 9, 2026
spot_img

ಯುಗಾದಿ ಸಂಭ್ರಮದಲ್ಲಿ ಕಾರ್ತಿಕ್ ಮನೆಗೆ ಹೊಸ ಅತಿಥಿ: ಮಗಳಿಗೆ ಮುದ್ದಾದ ಹೆಸರಿಟ್ಟ RCB ಬ್ಯಾಟಿಂಗ್ ಕೋಚ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಕುಟುಂಬದಿಂದ ಯುಗಾದಿ ಹಬ್ಬದಂದು ಸಂತಸದ ಸುದ್ದಿ ಹೊರಬಿದ್ದಿದೆ. ಅವರ ಪತ್ನಿ, ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಸಂತಸದ ವಿಚಾರವನ್ನು ದಂಪತಿ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದು, ಮುದ್ದಾದ ಮಗಳಿಗೆ “ರಾಹಾ ಪಲ್ಲಿಕಲ್ ಕಾರ್ತಿಕ್” ಎಂದು ಹೆಸರು ಇಟ್ಟಿದ್ದಾರೆ. ಈಗಾಗಲೇ ಈ ಜೋಡಿಗೆ ಕಬೀರ್ ಮತ್ತು ಜಿಹಾನ್ ಎಂಬ ಅವಳಿ ಗಂಡು ಮಕ್ಕಳು ಇದ್ದು, ಇದೀಗ ಕುಟುಂಬಕ್ಕೆ ಮೂರನೇ ಸಂತಾನ ಸೇರ್ಪಡೆಯಾಗಿದೆ.

ಇದನ್ನೂ ಓದಿ:

2015ರಲ್ಲಿ ವಿವಾಹವಾದ ಈ ಜೋಡಿ, ಹಲವು ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಗಮನ ಸೆಳೆದಿದೆ. 2021ರಲ್ಲಿ ದೀಪಿಕಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಇದೀಗ ಐಪಿಎಲ್ ಆರಂಭಕ್ಕೂ ಮುನ್ನ ಕಾರ್ತಿಕ್ ಮತ್ತೊಮ್ಮೆ ತಂದೆಯಾಗಿರುವುದು ವಿಶೇಷವಾಗಿದೆ. ಪ್ರಸ್ತುತ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಂಡದ ಸಾಧನೆಗೆ ಪ್ರಮುಖ ಪಾತ್ರವಹಿಸಿದ್ದಾರೆ.

Must Read