ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿರುವುದರಿಂದ ದರ್ಶನ್ ಇಂದು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಜಾಮೀನು ಪಡೆದ ನಂತರ ದರ್ಶನ್ ಪರ ವಕೀಲರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ವೈದ್ಯಕೀಯ ಕಾರಣ ನೀಡಿ ಕೋರ್ಟ್ ಆರು ವಾರಗಳ ಜಾಮೀನು ನೀಡಿದೆ. ನ್ಯಾಯಾಲಯದ ಎಲ್ಲಾ ವಿಧಿವಿಧಾನಗಳನ್ನು ಮುಗಿಸಿ ಇಂದು ಸಂಜೆಯೇ ದರ್ಶನ್ ಬಿಡುಗಡೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಇಂದು ದರ್ಶನ್ ಬಿಡುಗಡೆಯಾಗದಿದ್ದರೆ ಸೋಮವಾರವೇ ಬಿಡುಗಡೆ ಮಾಡಬೇಕು. ನಾಳೆ ದೀಪಾವಳಿ ರಜೆ ಆರಂಭವಾಗುವುದರಿಂದ ವಕೀಲರ ತಂಡ ಇಂದು ಎಲ್ಲಾ ವಿಧಿವಿಧಾನಗಳಲ್ಲಿ ನಿರತವಾಗಿದೆ ಎನ್ನಲಾಗಿದೆ.