ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೆಲ್ಲಲೇ ಬೇಕು ಎನ್ನುವ ಹಠದಿಂದ ಕಠಿಣ ಶ್ರಮ ಹಾಕಿ ಕೆಲಸ ಮಾಡೋರು ಬೇರೆ, ಅದೇ ಗೆಲ್ಲಲೇ ಬೇಕು ಎನ್ನುವ ಹಠದಿಂದ ಎದುರಾಳಿಗೆ ಏನಾದ್ರೂ ಮಾಡೋಕೆ ತಯಾರಾಗುವ ಜನರೂ ಇದ್ದಾರೆ.
ಬೇರೆಯವರ ಜೀವಕ್ಕೆ ಕುತ್ತು ತಂದಿಟ್ಟು ಆಟವಾಡಲು ಮುಂದಾಗಿದ್ದ ರಷ್ಯಾದ ಚೆಸ್ ಆಟಗಾರ್ತಿ ಅಮೀನಾ ಅಬಕರೋವಾರನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ರಷ್ಯಾದ ಚೆಸ್ ಫೆಡರೇಷನ್ ಆಕೆಯನ್ನು ಅಮಾನತುಗೊಳಿಸಿದೆ. ಪಂದ್ಯದ ವೇಳೆ ಪ್ರತಿಸ್ಪರ್ಧಿಯನ್ನು ವಿಷ ಹಾಕಿ ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದೆ. ಆಟಗಾರ್ತಿಯನ್ನು ಚೆಸ್ ಪಂದ್ಯಾವಳಿಯಿಂದ ಆಜೀವ ಪರ್ಯಂತ ದೂರವಿಡುವ ಕುರಿತು ಚಿಂತನೆ ನಡೆಯುತ್ತಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 40 ವರ್ಷದ ಅಮಿನಾ ಅಬಕರೋವಾ ತನ್ನ ಎದುರಾಳಿ ಉಮೈಗಾನತ್ ಒಸ್ಮನೋವಾಗೆ ವಿಷ ನೀಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಯನ್ನು ವೀಕ್ಷಿಸಿದ ಬಳಿಕ ಅಬಕರೋವಾರನ್ನು ಬಂಧಿಸಲಾಯಿತು. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಘಟನೆ ನಡೆದಿದೆ. ಇದರಲ್ಲಿ ಅಬಕರೋವಾ ಪಂದ್ಯಕ್ಕೆ ಕೇವಲ 20 ನಿಮಿಷಗಳ ಮೊದಲು ಚೆಸ್ ಬೋರ್ಡ್ ಬಳಿ ಹೋದರು. ಕ್ಯಾಮೆರಾಗಳು ಆನ್ ಆಗಿವೆಯೇ ಎಂದು ಅವರು ಮೊದಲು ಕೇಳಿದ್ದರು. ಆದರೆ ಅದು ಸರಿ ಇಲ್ಲ ಎಂದು ಹೇಳಲಾಗಿತ್ತು. ನಂತರ ಚೆಸ್ ಬೋರ್ಡ್ ಮೇಲೆ ಮರ್ಕ್ಯೂರಿ ರೀತಿಯ ವಿಷಯವನ್ನು ಲೇಪಿಸಿದ್ದರು. ಆದರೆ ಆಕೆಯ ದುರಾದೃಷ್ಟ ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ವಿಚಾರಣೆಯ ಬಳಿಕ ಒಸ್ಮಾನೋವಾ ಬಗ್ಗೆ ವೈಯಕ್ತಿಕ ಹಗೆತನದಿಂದಾಗಿ ವಿಷ ಹಾಕಿದ್ದೇನೆ ಎಂದು ಅಬಕರೋವಾ ಒಪ್ಪಿಕೊಂಡಿದ್ದಾರೆ. ತನ್ನ ಉದ್ದೇಶ ಉಸ್ಮಾನೋವಾ ಕೊಲೆ ಮಾಡುವುದು ಮಾಡುವುದು ಅಲ್ಲ ಆಕೆಯನ್ನು ಹೆದರಿಸುವುದು ಎಂದು ಅವಳು ಹೇಳಿಕೊಂಡಿದ್ದಾಳೆ.
Poisoning incident in Russian 🇷🇺 Chess.
Statement by the Chess Federation of Russia, video from Karjakin’s Telegram: pic.twitter.com/5ePqEUMAI1— Peter Heine Nielsen (@PHChess) August 7, 2024