ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಮ್ಮ WhatsApp, Instagramನಲ್ಲಿ ಈಗಾಗಲೇ ಒಂದು ನೋಟಿಫಿಕೇಶನ್ ಬಂದಿರಬಹುದು! ಹೌದು, ಮೆಟಾ ಸಂಸ್ಥೆ ತೆಗೆದುಕೊಂಡಿರುವ ಈ ‘ಪ್ಲಸ್’ ನಿರ್ಧಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನು ಈ ಆ್ಯಪ್‌ಗಳನ್ನು ಬಳಸಲು ಹಣ ಕೊಡಬೇಕಾ? ಎಂಬ ಪ್ರಶ್ನೆ ಬಳಕೆದಾರರಲ್ಲಿ ಮೂಡಿಸಿದೆ. ಇದರ ಹಿಂದಿರುವ ಅಸಲಿಯತ್ತೇನು? ಇಲ್ಲಿದೆ ಸಮಪೂರ್ಣ ಮಾಹಿತಿ…
ಮೆಟಾ ಸಂಸ್ಥೆ ತನ್ನ WhatsApp, Instagram, Facebook ಖಾತೆಗಳಿಗಾಗಿ ಹೊಸ ‘ಪ್ಲಸ್’ ಚಂದಾದಾರಿಕೆ ಯೋಜನೆ ಪರಿಚಯಿಸಿದೆ. ಈ ಯೋಜನೆಗಳ ಮೂಲಕ ಹೆಚ್ಚುವರಿ ಸೌಲಭ್ಯಗಳನ್ನು ಪಡೆಯಲು ಬಳಕೆದಾರರು ಮಾಸಿಕ ಶುಲ್ಕ ಪಾವತಿಸಬೇಕಾಗುತ್ತದೆ. ಹೊಸ ಯೋಜನೆಯ ಪ್ರಕಾರ,
Instagram Plus – ತಿಂಗಳಿಗೆ ಸುಮಾರು ₹375
Facebook Plus – ತಿಂಗಳಿಗೆ ಸುಮಾರು ₹375
WhatsApp Plus – ತಿಂಗಳಿಗೆ ಸುಮಾರು ₹280
ಶುಲ್ಕ ಪಾವತಿಸುವ ಬಳಕೆದಾರರಿಗೆ ಇಲ್ಲಿ ಕೆಲವು ವಿಶೇಷ ವೈಶಿಷ್ಟ್ಯಗಳು ಲಭ್ಯವಾಗಲಿವೆ.
Instagram ನಲ್ಲಿ ಹೊಸದಾಗಿ ಏನು ಸಿಗಲಿದೆ?
Instagram Plus ಬಳಸುವವರಿಗೆ ಸ್ಟೋರಿ ವೀಕ್ಷಣೆಯ ವಿಶೇಷ ಅಂಕಿಅಂಶಗಳು, ಸ್ಟೋರಿಗಳನ್ನು ರಹಸ್ಯವಾಗಿ ವೀಕ್ಷಿಸುವ ಅವಕಾಶ, 24 ಗಂಟೆಗೂ ಹೆಚ್ಚು ಕಾಲ ಸ್ಟೋರಿ ಉಳಿಸಿಕೊಳ್ಳುವ ಸೌಲಭ್ಯ, ವಿಶೇಷ ಹೈಲೈಟ್ ಮತ್ತು ಪ್ರೊಫೈಲ್ ಆಯ್ಕೆಗಳು ಹೆಚ್ಚುವರಿಯಾಗಿ ಸಿಗಲಿದೆ.
ಇದನ್ನೂ ಓದಿ:
WhatsApp ನಲ್ಲಿ ಹೊಸದಾಗಿ ಏನು ಸಿಗಲಿದೆ?
WhatsApp Plusನಲ್ಲಿ ಹೊಸ ಥೀಮ್‌ಗಳು, ಕಸ್ಟಮ್ ರಿಂಗ್‌ಟೋನ್‌ಗಳು, ಹೆಚ್ಚುವರಿ ಪಿನ್ ಚಾಟ್‌ಗಳು, ವಿಶೇಷ ಸ್ಟಿಕ್ಕರ್‌ಗಳು ಹಾಗೂ ಇತರ ವೈಯಕ್ತಿಕೀಕರಣ ಸೌಲಭ್ಯಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ.
ಈ ಬೆಳವಣಿಗೆ ಬೆನ್ನಿಗೇ ಸಾಮಾನ್ಯ ಬಳಕೆದಾರರು ಆತಂಕಕ್ಕೆ ಒಳಗಾಗಿದ್ದು, ಅವರ ಆತಂಕ ದೂರ ಮಾಡಲು ಮೆಟಾ ಸ್ಪಷ್ಟನೆ ನೀಡಿದೆ. ಪ್ರಸ್ತುತ WhatsApp, Facebook ಮತ್ತು Instagram ಉಚಿತ ಸೇವೆಗಳು ಹಾಗೆಯೇ ಮುಂದುವರಿಯಲಿವೆ. ಸಾಮಾನ್ಯ ಬಳಕೆದಾರರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಹಣ ಪಾವತಿಸುವವರಿಗೆ ಮಾತ್ರ ಹೆಚ್ಚುವರಿ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದಿದೆ. AI ಕ್ಷೇತ್ರದಲ್ಲಿ ಮೆಟಾ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಆದಾಯ ಮೂಲಗಳನ್ನು ಹುಡುಕುವ ಪ್ರಯತ್ನವಾಗಿ ಈ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಲಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.



