ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯಾ ಬ್ಲಾಕ್‌ಗೆ ಸೇರುವಂತೆ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪ್ರಸ್ತಾಪಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ನಿಗೂಢ ಪ್ರತಿಕ್ರಿಯೆ ನೀಡಿದ್ದಾರೆ.
ನಿತೀಶ್ ಕುಮಾರ್‌ಗೆ ಮೈತ್ರಿ ಬಾಗಿಲು ಸದಾ ತೆರೆದಿರುತ್ತದೆ ಎಂಬ ಲಾಲು ಪ್ರಸಾದ್ ಯಾದವ್ ಅವರ ಹೇಳಿಕೆ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೆಡಿಯು ಮುಖ್ಯಸ್ಥ, ನೀವು ಏನು ಹೇಳುತ್ತಿದ್ದೀರಿ? ಎಂದು ಮರು ಪ್ರಶ್ನಿಸಿದರು.
ಆರಿಫ್ ಮೊಹಮ್ಮದ್ ಖಾನ್ ಅವರು ಇಂದು ಬಿಹಾರದ ಹೊಸ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಿತೀಶ್ ಕುಮಾರ್ ಅವರನ್ನು ಪತ್ರಕರ್ತರು ರಾಜಭವನದಲ್ಲಿ ಪ್ರಶ್ನಿಸಿದರು.ಈ ವೇಳೆ ನಿತೀಶ್ ಕುಮಾರ್ ಕೈಮುಗಿದು ಮುಗುಳ್ನಕ್ಕರು.
ಪತ್ರಕರ್ತರು ಮತ್ತಷ್ಟು ಒತ್ತಿ ಕೇಳಿದಾಗ “ನೀವು ಏನು ಹೇಳುತ್ತಿದ್ದೀರಿ?” ಎಂದರು.