Friday, March 24, 2023

Latest Posts

ಕಾಶ್ಮೀರ ಟ್ರಿಪ್ ಮಾಡ್ತೀರಾ? ಐಆರ್‌ಸಿಟಿಸಿ ವತಿಯಿಂದ ‘ಜನ್ನತ್-ಎ-ಕಾಶ್ಮೀರ’ ಟೂರ್ ಪ್ಯಾಕೇಜ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಕಾಶ್ಮೀರ ನೋಡಬೇಕು ಆದರೆ ದುಬಾರಿ ಟ್ರಿಪ್ ಮಾಡೋಕಾಗಲ್ಲ ಎನ್ನುವವರಿಗೆ ಐಆರ್‌ಸಿಟಿಸಿ ಸದಾವಕಾಶವೊಂದನ್ನು ಕಲ್ಪಿಸಿದೆ. ಭಾರತೀಯ ರೈಲ್ವೆ ಜನ್ನತ್ ಎ ಕಾಶ್ಮೀರ್ ಟೂರ್ ಪ್ಯಾಕೇಜ್‌ನ್ನು ಘೋಷಿಸಿದ್ದು, ಆರು ದಿನಗಳ ಟ್ರಿಪ್ ಇದಾಗಿರಲಿದೆ. ಪ್ರವಾಸದ ಪ್ಯಾಕೇಜ್‌ನಲ್ಲಿ ಊಟ, ವಸತಿ ಹಾಗೂ ವಿಮಾನದ ದರ ಸೇರಿದೆ.

Azad Kashmir - Wikipediaಏಪ್ರಿಲ್ 9 ರಿಂದ ಟ್ರಿಪ್ ಆರಂಭವಾಗಲಿದ್ದು, ರೌಂಡ್ ಟ್ರಿಪ್ ಎಕಾನಮಿ ಫ್ಲೈಟ್ ಟಿಕೆಟ್ಸ್, ಶ್ರೀನಗರ ಬೋಟ್ ಹೌಸ್‌ನಲ್ಲಿ ಒಂದು ರಾತ್ರಿ ತಂಗುವ ಅವಕಾಶ, ಎಲ್ಲಾ ಪ್ರಯಾಣದಲ್ಲಿ ನಾನ್ ಎಸಿ ವಾಹನದಲ್ಲಿ ಹೋಗಬೇಕಾಗುತ್ತದೆ.

Kashmir - WorldAtlasಸೋನ್ಮಾರ್ಗ್, ಗುಲ್ಮರ್ಗ್, ಪಹಲ್ಗಾಮ್, ದಾಲ್ ಸರೋವರ್ ಹಾಗೂ ಇತರ ಸುಂದರ ಪ್ರದೇಶಗಳನ್ನು ನೋಡಬಹುದಾಗಿದೆ.

National Tourism Day 2023: Jammu & Kashmir is the new tourist hotspot post  pandemic - The CSR Journalಪ್ಯಾಕೇಜ್ ದರ?
ಕಾಶ್ಮೀರ ಟ್ರಿಪ್ ದರ 41,300 ರಿಂದ 61,000ದವರೆಗೂ ಇದೆ. ಒಬ್ಬ ವ್ಯಕ್ತಿ ದರ 61,000 ರೂಪಾಯಿಗಳೂ ಆಗಬಹುದು. ಆದರೆ ಇಬ್ಬರು ಒಟ್ಟಿಗೇ ಪ್ಯಾಕೇಜ್ ಪಡೆದರೆ ಇದರ ದರ ಪ್ರತಿ ವ್ಯಕ್ತಿಗೆ 44,000 ರೂಪಾಯಿಗಳಾಗಿವೆ. ಮೂರು ಜನ ಒಟ್ಟಿಗೆ ಪ್ರಯಾಣಿಸಿದರೆ ಅದರ ದರ 44 ಸಾವಿರ ರೂಪಾಯಿಗಳಾಗಿರಲಿದೆ. ಮಕ್ಕಳ ದರ 41,300 ರೂಪಾಯಿಗಳಾಗಿರಲಿದೆ.

Gulmarg | Best Time to Visit | Things to Do | Travel, Stay, Packages,  Activities - MakeMyTrip

 

 

 

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!