ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೇ ದಿನಗಳಲ್ಲಿ ಪುಟಿನ್ ಸಾವನ್ನಪ್ಪುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಸಿ ಭವಿಷ್ಯ ನುಡಿದ ಬೆನ್ನಲ್ಲೇ ಇದೀಗ ವ್ಲಾಡಿಮಿರ್ ಪುಟಿನ್ ಬಳಸುತ್ತಿದ್ದ ಕಾರು ಸ್ಫೋಟಗೊಂಡಿರುವ ಘಟನೆ ನಡೆದಿದೆ.
ಮಾಸ್ಕೋ ನಗರದ ಫೈನಾನ್ಶಿಯಲ್ ಸ್ಟೆಬಿಲಿಟಿ ಬೋರ್ಡ್ ರಹಸ್ಯ ಸೇವಾ ಪ್ರಧಾನ ಕಚೇರಿಯ ಬಳಿ ಕಾರು ಸ್ಫೋಟಗೊಂಡಿದೆ. ಸ್ಫೋಟಕ್ಕೆ ಕಾರಣ ಏನು ಎಂಬುದನ್ನು ಅಧಿಕಾರಿಗಳು ಇನ್ನು ಬಹಿರಂಗಪಡಿಸಿಲ್ಲ.