ವಿಂಬಲ್ಡನ್ ಟೆನಿಸ್ ಟೂರ್ನಿ: ಮಹಿಳಾ ಸಿಂಗಲ್ಸ್ ನಲ್ಲಿ ಎಲಿನಾ ರೈ ಬಕಿನಾಗೆ ಭರ್ಜರಿ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ನಲ್ಲಿ ಕಜಕಿಸ್ತಾನದ ಎಲೆನಾ ರೈಬಾಕಿನಾ ಮೊದಲ ಬಾರಿ ಗೆಲುವು ಸಾಧಿಸಿಕೊಂಡಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್ ಮೈದಾನದಲ್ಲಿ ಶನಿವಾರ ನಡೆದ ವನಿತೆಯರ ಸಿಂಗಲ್ಸ್ ಫೈನಲ್ ನಲ್ಲಿ ಎಲೆನಾ ರೈಬಾಕಿನಾ 2-6, 6-3, 6-3 ಸೆಟ್ ಗಳಿಂದ ಒನ್ಸ್ ಜಬ್ಯುರ್ ಅವರನ್ನು ಮಣಿಸಿದರು.
ಈ ಮೂಲಕ ವಿಂಬಲ್ಡನ್ ಪ್ರಶಸ್ತಿ ಗೆದ್ದ ಮೊದಲ ಕಜಕಿಸ್ತಾನದ ಆಟಗಾರ್ತಿ ಎಂಬ ದಾಖಲೆ ಬರೆದರು. ಇದೇ ವೇಳೆ ಫೈನಲ್ ತಲುಪಿದ ಮೊದಲ ದಕ್ಷಿಣ ಆಫ್ರಿಕಾದ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದ ಒನ್ಸ್ ಜಬ್ಯುರ್ ಅವರಿಗೆ ನಿರಾಸೆ ಉಂಟಾಯಿತು.
ಎಲೆನಾ ರೈಬಾಕಿನಾ ಮೊದಲ ಸೆಟ್ ನಲ್ಲಿ ಸೋಲುಂಡರೂ ನಂತರ ಅಮೋಘವಾಗಿ ಚೇತರಿಸಿಕೊಂಡು ನಂತರದ ಎರಡೂ ಸೆಟ್ ಗಳನ್ನು ಸುಲಭವಾಗಿ ಗೆದ್ದು ಪ್ರಶಸ್ತಿ ಎತ್ತಿ ಹಿಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!