ವಿಧಾನ ಪರಿಷತ್ ನಲ್ಲಿ ಬಿಜೆಪಿ ಅಭ್ಯರ್ಥಿಗಳ ನ್ನು ಗೆಲ್ಲಿಸಿ : ಪ್ರಾಣೇಶ್

ಹೊಸದಿಗಂತ ವರದಿ ಮೈಸೂರು:

ವಿಧಾನ ಪರಿಷತ್ ನಲ್ಲಿ ಬಿಜೆಪಿ ಗೆ ಬಹುಮತ ಸಿಗಬೇಕಾಗಿರುವ ಕಾರಣ ದಕ್ಷಿಣ ಪದವೀಧರ ರ ಕ್ಷೇತ್ರ ಸೇರಿದಂತೆ ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ವಿಧಾನಸಭೆ ಯ ಉಪಸಭಾಪತಿ ಪ್ರಾಣೇಶ್ ತಿಳಿಸಿದರು.

ಗುರುವಾರ ನಗರದ ಬಂಟರ ಸಮುದಾಯದ ಭವನದಲ್ಲಿ ಬಿಜೆಪಿ ಮೈಸೂರು ವಿಭಾಗದಿಂದ ಆಯೋಜಿಸಿದ್ದ ದಕ್ಷಿಣ ಪದವೀಧರ ರ ಕ್ಷೇತ್ರದ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಸಭೆಯಲ್ಲಿ ಸರ್ಕಾರ ಮತಾಂತರ ನಿಷೇಧ, ಗೋ ಹತ್ಯೆ ನಿಷೇಧ ಮುಂತಾದ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆದಿದೆ. ಅದರ ಅನುಮೋದನೆಗೆಂದು ವಿಧಾನ ಪರಿಷತ್ ನಲ್ಲಿ ಮಂಡಿಸಿದರೆ, ಬಿಜೆಪಿ ಗೆ ಸ್ಪಷ್ಟವಾದ ಬಹುಮತ ಇಲ್ಲದ ಕಾರಣ ಅನುಮೋದನೆ ಸಿಗುತ್ತಿಲ್ಲ. ಹೀಗಾಗಿ ಪರಿಷತ್ ನಲ್ಲಿ ಪಕ್ಷಕ್ಕೆ ಬಹುಮತದ ಅಗತ್ಯ ವಿದೆ. ಹಾಗಾಗಿ ಪರಿಷತ್ ಸದಸ್ಯ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಸಾಮಾನ್ಯ ಜನರನ್ನು ಮುಟ್ಟುವಂತೆ ಕಾರ್ಯಕ್ರಮ ಗಳನ್ನು ನೀಡಿದ್ದಾರೆ. ಹಾಗಾಗಿ ಪಕ್ಷದ ಕಾರ್ಯಕರ್ತರು ಮತದಾರರ ಮನೆ, ಮನೆಗೆ ಹೋಗಿ ಮತ ಹೇಳುವುದಕ್ಕೆ ಯಾವುದೇ ಹಿಂಜರಿಕೆ, ಮುಜುಗರ ಇಲ್ಲ. ಧೈರ್ಯವಾಗಿ ಮತ ಕೇಳಿ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ದೇಶ ಅಭಿವೃದ್ಧಿ ಯತ್ತ ಸಾಗುತ್ತಿದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಯಾಗಬೇಕು. ಅವರ ಆಡಳಿತದ ಲ್ಲಿ ದೇಶ ಮತ್ತಷ್ಟು ಅಭಿವೃದ್ಧಿ ಯತ್ತ ಸಾಗಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!