ಹೊಸದಿಗಂತ ವರದಿ,ಮುಂಡಗೋಡ:
ತಾಲೂಕಿನ ಮಿಂಚು, ಗುಡುಗು, ಗಾಳಿ ಸಹಿತ ಮಳೆಯಾಗಿದ್ದು ಮಳಗಿ ಗ್ರಾಮದಲ್ಲಿ ಜೋರಾದ ಗಾಳಿಯಿಂದ ಮರವೊಂದು ಬಸ್ ಮೇಲೆ ಬಿದ್ದು ಗಾಜುಗಳು ಒಡೆದು ಹಾನಿಯಾಗಿ ರಸ್ತೆ ಸಂಚಾರ ಬಂದಾದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ತಾಲೂಕಿನ ಮೊಡ ಕವಿದ ವಾತಾವರವಿದ್ದು ವಿವಿಧ ಕಡೆಗಳಲ್ಲಿ ಗುಡುಗು ಮಿಂಚು ಜೋರಾದ ಗಾಳಿ ಸಹಿತ ಮಳೆಯಾಗುತ್ತಿದೆ.
ಬುಧವಾರ ಸಾಯಂಕಾಲದಿಂದ ಆರಂಭವಾದ ಗಾಳಿಯಿಂದ ಶಿರಸಿಕಡೆಯಿಂದ ಮುಂಡಗೋಡ ಮಾರ್ಗವಾಗಿ ಕಲ್ಬುರ್ಗಿಗೆ ತೆರಳುವ ಬಸ್ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದು ಬಸ್ ಟಾಪ್ ನೆಗ್ಗಿದೆ ಹಾಗೂ ಸುತ್ತಮುತ್ತಲಿನ ಬಸ್ ಗಾಜುಗಳು ಒಡೆದು ಹಾನಿಯಾಗಿವೆ.
ಇದರಿಂದ ರಸ್ತೆ ಸಂಚಾರ ಬಂದಾಗಿದೆ. ಮರ ಬಸ ಮೇಲೆ ಬಿದ್ದ ವಿಶಯ ತಿಳಿದು ಸ್ಥಳಿಯರು ಜಮಾವಣೆಗೊಂಡು ಮರವನ್ನು ತೆರವುಗೊಳಿಸಲು ಮುಂದಾಗಿದ್ದಾರೆ ಸ್ಥಳಕ್ಕೆ ಸ್ಥಳಿಯ ಪೊಲೀಸರು ಬೇಟಿ ನೀಡಿದ್ದಾರೆ ಈ ಅವಘಡದಿಂದ ಸದ್ಯ ಒಂದು ಗಂಟೆಯಿಂದ ಬಸ್ ಸಂಚಾರ ಬಂದಾಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.