ಅಮೆರಿಕ ಕಚೇರಿಯಲ್ಲಿ 120 ಉದ್ಯೋಗಿಗಳನ್ನು ವಜಾಗೊಳಿಸಿದ ವಿಪ್ರೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಸಿದ್ಧ ಐಟಿ ಕಂಪನಿ ವಿಪ್ರೋ ತನ್ನ ಅಮೆರಿಕ ಕಚೇರಿಯಲ್ಲಿ 120 ಉದ್ಯೋಗಿಗಳನ್ನು ಹೊರಹಾಕಿದೆ. ಮೂಲಗಳ ವರದಿಯ ಪ್ರಕಾರ ಅಮೆರಿಕದ ಫ್ಲೋರಿಡಾದ ಟ್ಯಾಂಪಾದಲ್ಲಿರುವ ಕಂಪನಿಯ ಕಚೇರಿಯಲ್ಲಿ ಈ ಉದ್ಯೋಗ ಕಡಿತಗಳು ಸಂಭವಿಸಿವೆ. ವಿಪ್ರೋ ಇದನ್ನು ಪ್ರತ್ಯೇಕ ಘಟನೆ ಎಂದು ವಿವರಿಸಿದ್ದು ಕಂಪನಿಯ ವ್ಯಾಪಾರ ಮರುಹೊಂದಿಸುವಿಕೆ ಕಾರ್ಯದಲ್ಲಿ 120 ಜನರು ಉದ್ಯೋಗ ಕಳೆದುಕೊಂಡಿದ್ದಾರೆ.

ಈ ಕುರಿತು ಕೆಲಸಗಾರರ ಹೊಂದಾಣಿಕೆ ಮತ್ತು ಮರುತರಬೇತಿ ಅಧಿಸೂಚನೆಯಲ್ಲಿ (WARN) ವಿಪ್ರೋ ವಿವರಣೆ ನೀಡಿದ್ದು ಅದನ್ನು ಫ್ಲೋರಿಡಾ ಆರ್ಥಿಕ ಅವಕಾಶ ಇಲಾಖೆಗೆ ವರದಿ ಸಲ್ಲಿಸಿದೆ ಎನ್ನಲಾಗಿದೆ. “ವಿಪ್ರೋ ಟ್ಯಾಂಪಾ ಪ್ರದೇಶದಲ್ಲಿ ಹೆಚ್ಚಿನ ಬದ್ಧತೆ ಹೊಂದಿದೆ. ಟ್ಯಾಂಪಾ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಉದ್ಯೋಗಿಗಳ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಬೆಂಗಳೂರು ಪ್ರಧಾನ ಕಚೇರಿಯ ಸಂಸ್ಥೆಯ ಹೇಳಿಕೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!