September 27, 2026
Sunday, September 27, 2026
spot_img

ಇನ್ನೇನು ಸಾಲು ಸಾಲು ಹಬ್ಬಗಳು ಬಂದೇಬಿಡ್ತು, ಉತ್ತರ ಕರ್ನಾಟಕದ ಸ್ಪೆಷಲ್‌ ಶೇಂಗಾ ಹೋಳಿಗೆ ಟ್ರೈ ಮಾಡ್ತೀರಾ?

ಉತ್ತರ ಕರ್ನಾಟಕದ ಅತ್ಯಂತ ಜನಪ್ರಿಯ ಹಾಗೂ ಎಲ್ಲರ ಫೇವರೆಟ್‌ ಶೇಂಗಾ ಹೋಳಿಗೆ. ನಮ್ಮಲ್ಲಿ ಹೇಗೆ ಪ್ರತೀ ಹಬ್ಬಕ್ಕೂ ಬೇಳೆ ಹೋಳಿಗೆ ಮಾಡುತ್ತಾರೋ ಉತ್ತರ ಕರ್ನಾಟಕದಲ್ಲಿ ಹಾಗೆಯೇ ಶೇಂಗಾ ಹೋಳಿಗೆ ಮಾಡುತ್ತಾರೆ. ಈ ಹೋಳಿಗೆ ವಾರ-ಹತ್ತು ದಿನದವರೆಗೂ ಹಾಳಾಗೋದಿಲ್ಲ. ಈ ಬಾರಿ ವರಮಹಾಲಕ್ಷ್ಮೀ ಹಬ್ಬಕ್ಕೆ ಮಿಸ್‌ ಮಾಡದೇ ಈ ಶೇಂಗಾ ಹೋಳಿಗೆ ತಯಾರಿಸಿ..

ಸಾಮಾಗ್ರಿಗಳು: ಶೇಂಗಾ, ಬೆಲ್ಲ, ಎಳ್ಳು, ಏಲಕ್ಕಿ ಪುಡಿ, ಮೈದಾ ಅಥವಾ ಗೋಧಿಹಿಟ್ಟು, ಚಿರೋಟಿ ರವೆ, ಅರಿಶಿಣ, ತುಪ್ಪ

ಮಾಡುವ ವಿಧಾನ :

ಮೊದಲು ಮೈದಾ ಅಥವಾ ಗೋಧಿ ಹಿಟ್ಟಿಗೆ ಎಣ್ಣೆ ಇಲ್ಲವೇ ತುಪ್ಪ ಹಾಕಿ ನೀರು ಹಾಕಿ ಕಲಸಿ ಇಟ್ಟುಕೊಳ್ಳಿ. ಬೇಕಿದ್ದಲ್ಲಿ ಬಣ್ಣಕ್ಕೆ ಅರಿಶಿಣ ಹಾಕಬಹುದು.

ಹೂರಣಕ್ಕಾಗಿ ಶೇಂಗಾವನ್ನು ಹುರಿದು ಸಿಪ್ಪೆ ತೆಗೆಯಿರಿ. ನಂತರ ಮಿಕ್ಸಿ ಜಾರ್‌ನಲ್ಲಿ ಶೇಂಗಾ, ಬೆಲ್ಲ, ಏಲಕ್ಕಿ, ಎಳ್ಳು ಹಾಗೂ ಗಸಗಸೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ನಂತರ ಕಲಸಿದ ಹಿಟ್ಟಿನ ಒಳಗೆ ಒಂದು ಶೇಂಗಾ ಹೂರಣದ ಉಂಡೆ ಇಟ್ಟು ಎಣ್ಣೆ ಕೈಯಲ್ಲಿ ತಟ್ಟಿ ಬೇಯಿಸಿದ್ರೆ ಹೋಳಿಗೆ ರೆಡಿ

Must Read