CINE | ರಿಲೀಸ್‌ ಆದ ಎರಡೇ ತಿಂಗಳಿನಲ್ಲಿ ʼಅನಿಮಲ್‌ʼ ದಾಖಲೆ ಉಡೀಸ್‌ ಮಾಡಿದ ʼಲಾಪತಾ ಲೇಡೀಸ್‌ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಆಮಿರ್​ ಖಾನ್​ ನಿರ್ಮಾಣ ಮಾಡಿದ ಲಾಪತಾ ಲೇಡೀಸ್​’ ನೆಟ್​ಫ್ಲಿಕ್ಸ್​ನಲ್ಲಿ ಭರ್ಜರಿ ಯಶಸ್ಸು ಮಾಡಿದೆ. ಥಿಯೇಟರ್‌ಗಳಲ್ಲಿ ಹೇಳಿಕೊಳ್ಳುವಷ್ಟು ಲಾಭವಾಗದೇ ಇದ್ದರೂ ಒಟಿಟಿಯಲ್ಲಿ ಸಿನಿಮಾ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Laapataa Ladies review: Kiran Rao weaves content, comedy and conversations  | Bollywood - Hindustan Timesಹೊಸ ಮುಖಗಳ ಸಿನಿಮಾ ಇದಾಗಿದ್ದರೂ ಜನ ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ನಿಶ್ಕಲ್ಮಶ ಪ್ರೀತಿ, ಸಾಫ್ಟ್‌ ಫೆಮಿನಿಸಮ್‌ನಿಂದ ಸಿನಿಮಾ ಜನರಿಗೆ ಹತ್ತಿರವಾಗಿದೆ. ಅಷ್ಟೇ ಅಲ್ಲದೆ ಈ ಸಿನಿಮಾ ಬಾಲಿವುಡ್‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿರುವ ಅನಿಮಲ್‌ ಸಿನಿಮಾದ ರೆಕಾರ್ಡ್‌ ಮುರಿದಿದೆ.

Laapataa Ladies (2024) - Movie | Reviews, Cast & Release Date - BookMyShowನೆಟ್‌ಫ್ಲಿಕ್ಸ್‌ನಲ್ಲಿ ಅನಿಮಲ್‌ ರಿಲೀಸ್‌ ಆದಾಗ ಭರ್ಜರಿ ಕಮಾಯಿ ಮಾಡಿತ್ತು. ಆದರೆ ಲಾಪತಾ ಲೇಡೀಸ್‌ ರಿಲೀಸ್‌ನ ಎರಡೇ  ತಿಂಗಳಿನಲ್ಲಿ ಅನಿಮಲ್‌ ಸಿನಿಮಾಗಿಂತ ಹೆಚ್ಚು ಕಮಾಯಿ ಮಾಡಿದೆ, ಹೆಚ್ಚು ಜನರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ.

Ranbir Kapoor's 'Animal' Is Worldwide Top Film, Ahead of 'Napoleon'ಹಲವು ವರ್ಷಗಳ ಬಳಿಕ ಕಿರಣ್​ ರಾವ್​ ಅವರು ನಿರ್ದೇಶನ ಮಾಡಿದ ಸಿನಿಮಾ ‘ಲಾಪತಾ ಲೇಡೀಸ್​’. ಈ ಚಿತ್ರದಲ್ಲಿ ಸ್ಪರ್ಶ್​ ಶ್ರೀವಾಸ್ತವ್​, ನಿತಾನ್ಷಿ ಗೋಯಲ್​, ಪ್ರತಿಭಾ ರಂಟಾ, ಛಾಯಾ ಕದಂ, ರವಿ ಕಿಶನ್​ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಸಿನಿಮಾದ ಕಥೆ ಎಲ್ಲರಿಗೂ ಇಷ್ಟ ಆಗುತ್ತಿದೆ.

Laapataa Ladies Movie Review: A Classic Blend of Entertainment &  Enlightenment!ಎಲ್ಲ ಕಲಾವಿದರ ಅಭಿನಯಕ್ಕೆ ಭರಪೂರ ಮೆಚ್ಚುಗೆ ಸಿಗುತ್ತಿದೆ. ‘ಲಾಪತಾ ಲೇಡೀಸ್​’ ಸಿನಿಮಾದಲ್ಲಿ ಒಂದು ಭಾವನಾತ್ಮಕವಾದ ಕಹಾನಿ ಇದೆ. ಸಿನಿಮಾದಲ್ಲಿನ ಅನೇಕ ಸನ್ನಿವೇಶಗಳು ಪ್ರೇಕ್ಷಕರಿಗೆ ಕನೆಕ್ಟ್​ ಆಗುತ್ತಿವೆ. ಇದೊಂದು ಹೃದಯಸ್ಪರ್ಶಿ ಸಿನಿಮಾ ಎಂದು ನೆಟ್ಟಿಗರು ಹೊಗಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!