Sunday, March 26, 2023

Latest Posts

ಸಂಸ್ಕೃತಿಯಿಲ್ಲದೆ, ಅಭಿವೃದ್ಧಿ ಇಲ್ಲದೆ ಕೇವಲ ಬಡಬಡಾಯಿಸುವ ಖಗೆ೯: ಎನ್. ರವಿಕುಮಾರ್

ಹೊಸದಿಗಂತ ವರದಿ, ಕಲಬುರಗಿ.

ಸಂಸ್ಕೃತಿ ಹಾಗೂ ಅಭಿವೃದ್ಧಿ ಇಲ್ಲದೇ,ಕೇವಲ ಬಡಬಡಾಯಿಸುವ ನಾಯಕ ಪ್ರಿಯಾಂಕ್ ಖಗೆ೯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಖಗೆ೯ ಮೇಲೆ ವಾಗ್ದಾಳಿ ನಡೆಸಿದರು.

ನಗರದ ಚೆಂಬರ್ ಆಫ್ ಕಾಮಸ್೯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ಗ್ರಾಮಾಂತರ ಜಿಲ್ಲಾ ಕಾಯ೯ಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಮುಖ್ಯ ಟಾರಗೆಟ್, ಚಿತಾಪುರ ಮತ್ತು ಕಲಬುರಗಿ ಉತ್ತರ ಮತಕ್ಷೇತ್ರವಾಗಿವೆ ಎಂದ ಅವರು,ನಮ್ಮ ಕಾಯ೯ಕತ೯ರು ಅಗ್ರೆಸ್ಸಿವಾಗಿ ರಣಾಂಗಣಕ್ಕೆ ಇಳಿಯಬೇಕು ಎಂದರು.

ಜಿಲ್ಲೆಯ 9 ವಿಧಾನ ಸಭಾ ಕ್ಷೇತ್ರಗಳಲ್ಲಿ ಕೇಸರಿ ಬಾವುಟ ಹಾರಿಸುವವರೆಗೂ ನಮ್ಮ ಕಾಯ೯ಕತ೯ರು ವೀರಮಸಬಾರದು.ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಮನೆಗೆ ಕಳುಹಿಸುವುದು ನಮ್ಮ ಸಂಕಲ್ಪ ಆಗಿರಬೇಕು. ಮುಂಬರುವ ಚುನಾವಣೆಯಲ್ಲಿ 150ಕ್ಕಿಂತ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!