ದಿಗಂತ ವರದಿ ವಿಜಯಪುರ:
ಆಟೋ ಪಲ್ಟಿಯಾಗಿ ಮಹಿಳೆಯೊಬ್ಬಳು ಸಾವಿಗೀಡಾದ ಘಟನೆ ನಗರ ಹೊರ ವಲಯ ಬೆಂಗಳೂರು ಹೆದ್ದಾರಿ ಟೋಲ್ ಗೇಟ್ ಬಳಿ ಬೆಳಗ್ಗೆ ನಡೆದಿದೆ.
ಮೃತಪಟ್ಟವಳನ್ನು ಹಿಟ್ನಳ್ಳಿಯ ಮಹಾದೇವಿ ಮನೋಹರ ಬೆಳ್ಳುಬ್ಬಿ (58) ಎಂದು ಗುರುತಿಸಲಾಗಿದೆ.
ಮಹಾದೇವಿ ಬೆಳ್ಳುಬ್ಬಿ ಪೌರ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಆಟೋದಲ್ಲಿ ನಗರಕ್ಕೆ ಆಗಮಿಸುತ್ತಿದ್ದ ವೇಳೆ, ಈ ದುರ್ಘಟನೆ ಸಂಭವಿಸಿದೆ.
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.