ಹೊಸದಿಗಂತ ವರದಿ ವಿಜಯಪುರ :
ಜಮೀನಿನಲ್ಲಿ ಕೆಲಸ ಮಾಡುವ ವೇಳೆ ವಿಷಪೂರಿತ ಹಾವು ಕಚ್ಚಿ ಮಹಿಳೆ ಸಾವಿಗೀಡಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ಮಹಿಳೆ ಲಕ್ಷ್ಮೀಬಾಯಿ ವಿಠೋಬಾ ಪೂಜಾರಿ (45) ಮೃತಪಟ್ಟಿರುವ ದುರ್ದೈವಿ. ಲಕ್ಷ್ಮೀಬಾಯಿ ಪೂಜಾರಿ ವಿಷಪುರೀತ ಹಾವು ಕಡಿತದಿಂದ ಸ್ಥಳದಲ್ಲಿ ಮೃತಪಟ್ಟಿರುತ್ತಾಳೆ.
ವಿಜಯಪುರದ ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.