ಐದು ತಿಂಗಳ ಗರಿಷ್ಠ ಮಟ್ಟ ತಲುಪಿದೆ ಭಾರತದ ವಿದೇಶಿ ವಿನಿಮಯ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಿಂದಿನ ಎರಡು ವಾರಗಳಲ್ಲಿ ತುಸು ಕುಸಿತ ಕಂಡಿದ್ದ ಭಾರತದ ವಿದೇಶಿ ವಿನಿಮಯ ಸಂಗ್ರಹವು ಜನವರಿ 13ಕ್ಕೆ ಕೊನೆಗೊಂಡ ವಾರದಲ್ಲಿ ಏರಿಕೆಯಾಗಿದೆ. 10.41 ಶತಕೋಟಿ ಡಾಲರ್‌ ನಷ್ಟು ಏರಿಕೆ ಕಂಡು 572 ಶತಕೋಟಿ ಡಾಲರ್‌ ಗೆ ತಲುಪಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕಿನ ಅಂಕಿ ಅಂಶಗಳು ತೋರಿಸಿವೆ. ಈ ಜಿಗಿತದೊಂದಿಗೆ ಭಾರತದ ವಿದೇಶಿ ವಿನಿಮಯ ಸಂಗ್ರಹವು ಐದು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ.

ಜನವರಿ 6 ರಂದು ಕೊನೆಗೊಂಡ ವಾರದಲ್ಲಿ, ದೇಶದ ವಿದೇಶೀ ವಿನಿಮಯ ಸಂಗ್ರಹವು 561.583 ಶತಕೋಟಿ ಡಾಲರ್‌ಗಳಷ್ಟಿತ್ತು. RBI ನ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದ ವಿದೇಶೀ ವಿನಿಮಯ ಸಂಗ್ರಹದ ಅತಿದೊಡ್ಡ ಅಂಶವಾದ ವಿದೇಶಿ ಕರೆನ್ಸಿ ಆಸ್ತಿಗಳು 9.078 ಶತಕೋಟಿ ಡಾಲರ್‌ ಏರಿಕೆಯಾಗಿ 505.519 ಶತಕೋಟಿ ಡಾಲರ್‌ ಗೆ ತಲುಪಿದೆ. ಚಿನ್ನದ ಸಂಗ್ರಹವು 1.106 ಶತಕೋಟಿ ಡಾಲರ್‌ ಏರಿಕೆಯಾಗಿ 42.890 ಶತಕೋಟಿ ಡಾಲರ್‌ ಗೆ ತಲುಪಿದೆ.

2022 ರ ಆರಂಭದಲ್ಲಿ, ಒಟ್ಟಾರೆ ವಿದೇಶೀ ವಿನಿಮಯ ಸಂಗ್ರಹವು ಸುಮಾರು 633 ಬಿಲಿಯನ್ ಡಾಲರ್‌ ಗಳಷ್ಟಿತ್ತು. ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಕುಸಿದ ಕಾರಣ ವಿದೇಶಿ ವಿನಿಮಯ ಸಂಗ್ರಹದಲ್ಲಿ ಕುಸಿತವುಂಟಾಗಿತ್ತು. ಪ್ರಸ್ತುತ ವಿದೇಶಿ ವಿನಿಮಯ ಸಂಗ್ರಹವು ಮತ್ತೆ ಏರಿಕೆ ದಾಖಲಿಸುತ್ತಿರುವುದು ಧನಾತ್ಮಕ ಬೆಳವಣಿಗೆ ಎನ್ನಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!