ಹೊಸದಿಗಂತ ವರದಿ,ಮೈಸೂರು:
ಹಾವು ಕಚ್ಚಿ ರೈತ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಉಂಡವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಸುಶೀಲಮ್ಮ(೫೨) ಹಾವು ಕಚ್ಚಿ ಮೃತಪಟ್ಟವರು.
ಜಮೀನಿನಲ್ಲಿ ಜೋಳದ ಕೆಲಸ ಮಾಡುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿದ್ದು, ತಕ್ಷಣವೇ ಅವರನ್ನು ಹುಣಸೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ವೈದ್ಯರು ಪರೀಕ್ಷಿಸಿದಾಗ ಸುಶೀಲಮ್ಮರವರು ಮೃತಪಟ್ಟಿರುವುದು ತಿಳಿಸಿದ್ದಾರೆ. ಘಟನೆ ಸಂಬoಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.