September 4, 2026
Friday, September 4, 2026
spot_img

ಜಿಮ್ಸ್ ಆಸ್ಪತ್ರೆ ಹೊರಗೇ ಮಹಿಳೆ ಸಾ*ವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗದಗ: ನಗರದ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ(ಜಿಮ್ಸ್‌) ಆಸ್ಪತ್ರೆ ಹೊರಗೆ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮುಂಡರಗಿ ತಾಲ್ಲೂಕಿನ ಶೀರನಹಳ್ಳಿಯ ರತ್ನವ್ವ (45) ಮೃತರು. ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಬುಧವಾರ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡದೆ, ಅಲೆದಾಡಿಸಿದರು. ಗುರುವಾರ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಹೊರಗೆ ಕರೆತಂದಾಗ ಕುಸಿದುಬಿದ್ದು ಮೃತಪಟ್ಟರು ಎಂದು ಮೃತರ ಪುತ್ರ ನಾಗರಾಜ ತಿಳಿಸಿದರು.

ಇದನ್ನೂ ಓದಿ:

ಈ ಕುರಿತು ಪ್ರತಿಕ್ರಿಯಿಸಿದ ಜಿಮ್ಸ್‌ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ‘ಮಹಿಳೆಗೆ ದೇಹದ ತುಂಬ ಚರ್ಮದ ಸಮಸ್ಯೆ ಇತ್ತು. ಈ ಮೊದಲು ಸ್ಟಿರಾಯಿಡ್ಸ್‌ ಪಡೆದಿದ್ದಾಗಿ ತಿಳಿಸಿದ್ದರು. ಚರ್ಮರೋಗ ಹೊರ ರೋಗಿಗಳ ವಿಭಾಗದಲ್ಲಿ ದಾಖಲಿಸಿಕೊಂಡು, ತಜ್ಞವೈದ್ಯರು ಅಗತ್ಯ ಚಿಕಿತ್ಸೆ, ಮಾತ್ರೆ ನೀಡಿದ್ದರು. ಗುರುವಾರ ಸ್ಕಾನಿಂಗ್ ಮಾಡಿಸಲು ತಿಳಿಸಿದ್ದೆವು. ಮಹಿಳೆಗೆ ಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದರೂ, ಬೇರೆಡೆ ಹೋಗುವುದಾಗಿ ಹೇಳಿದರು. ಮಹಿಳೆ ಸ್ಥೂಲಕಾಯ ಇದ್ದಿದ್ದರಿಂದ ಹೃದಯಾಘಾತ ಆಗಿರಬಹುದು’ ಎಂದು ಸ್ಪಷ್ಟನೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !